Friday, 13th December 2024

36, 401 ಹೊಸ ಕರೋನಾ ಕೇಸು ಪತ್ತೆ

ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೋನಾಗೆ 530 ಮಂದಿ ಮೃತಪಟ್ಟಿದ್ದು, 36 ಸಾವಿರದ 401 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ 64 ಸಾವಿರದ 129 ಮಂದಿಯಿದ್ದು, ಇದುವರೆಗೆ 3 ಕೋಟಿಯ 15 ಲಕ್ಷದ 25 ಸಾವಿರದ 080 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 39 ಸಾವಿರದ 157 ಮಂದಿ ಗುಣಮುಖರಾಗಿದ್ದರೆ, ಮೃತರ ಒಟ್ಟು ಸಂಖ್ಯೆ 4 ಲಕ್ಷದ 33 ಸಾವಿರದ 049ಕ್ಕೇರಿದೆ.

ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಭಾರತದಲ್ಲಿ ಕೋವಿಡ್ -19 ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತವು ದೇಶಾದ್ಯಂತ 50 ಕೋಟಿ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದೆ.ಕೇವಲ 55 ದಿನಗಳಲ್ಲಿ 10 ಕೋಟಿ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಕೋವಿಡ್ ಲಸಿಕೆ ಅಭಿಯಾನ ಆರಂಭಗೊಂಡ ನಂತರ ಇಲ್ಲಿಯವರೆಗೆ 56.64 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.