Friday, 13th December 2024

37,154 ಮಂದಿಯಲ್ಲಿ ಕರೋನಾ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಸೋಮವಾರ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 37,154 ಮಂದಿಯಲ್ಲಿ ಹೊಸದಾಗಿ ಕರೋನಾ ಸೋಂಕು ಪತ್ತೆಯಾಗಿ, 724 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.

ಸೋಮವಾರ ಒಟ್ಟು ಸೋಂಕಿತರ ಸಂಖ್ಯೆ 3,08,74,376ಕ್ಕೆ ತಲುಪಿದ್ದು, ಸಾವಿನ 4,08,764ಕ್ಕೆ ಏರಿಕೆಯಾಗಿದೆ. ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 4,50,899ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

39,649 ಮಂದಿ ಗುಣಮುಖರಾಗುವುದರೊಂದಿಗೆ, ಚೇತರಿಸಿಕೊಂಡವರ ಸಂಖ್ಯೆ 3,00,14,713ಕ್ಕೆ ತಲುಪಿದೆ. 14,32,343 ಮಂದಿಯನ್ನು ಪರೀಕ್ಷೆಗೊಳ ಪಡಿಸಲಾಗಿದ್ದು, 43,23,17,813 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.