Wednesday, 11th December 2024

ಷೇರುಪೇಟೆಯಲ್ಲಿ ಜಾಗತಿಕ ನಕಾರಾತ್ಮಕತೆ: ನಿಫ್ಟಿ 38 ಅಂಕಗಳ ಕುಸಿತ

ಮುಂಬೈ: ಭಾರತೀಯ ಷೇರುಪೇಟೆ ಜಾಗತಿಕ ನಕಾರಾತ್ಮಕ ಸೂಚನೆಯ ನಡುವೆ ಬುಧವಾರ ಕುಸಿತಗೊಂಡಿದೆ.

ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 91 ಪಾಯಿಂಟ್ಸ್, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 38 ಪಾಯಿಂಟ್ಸ್‌ ಕುಸಿತಗೊಂಡಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 91.56 ಪಾಯಿಂಟ್ಸ್‌ ಇಳಿಕೆಗೊಂಡು 52681.49 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 38.30 ಪಾಯಿಂಟ್ಸ್‌ ಕುಸಿದು 15831 ಮುಟ್ಟಿದೆ.

ವಹಿವಾಟು ಆರಂಭಗೊಂಡಾಗ 1376 ಷೇರುಗಳು ಏರಿಕೆಗೊಂಡರೆ, 1270 ಷೇರುಗಳು ಕುಸಿದಿವೆ. ಒಎನ್‌ಜಿಸಿ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಐಒಸಿ, ಕೋಲ್ ಇಂಡಿಯಾ ಮತ್ತು ಐಟಿಸಿ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಅದಾನಿ ಪೋರ್ಟ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಪವರ್ ಗ್ರಿಡ್ ಕಾರ್ಪೊರೇಷನ್ ಮತ್ತು ಟಾಟಾ ಸ್ಟೀಲ್ ನಷ್ಟ ಅನುಭವಿಸಿವೆ.

ಒಎನ್‌ಜಿಸಿಯ ಷೇರು 2 ರೂ.ಗಳ ಲಾಭದೊಂದಿಗೆ 126.90 ರೂ., ಟಾಟಾ ಕನ್ಸ್ಯೂಮರ್ ಷೇರು 2 ರೂ.ಗಳ ಲಾಭದೊಂದಿಗೆ 721.25 ರೂ., ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು 2 ರೂ.ಗಳ ಲಾಭದೊಂದಿಗೆ 694.75 ರೂ., ಸನ್ ಫಾರ್ಮಾ ಷೇರು 2 ರೂ.ಗಳ ಲಾಭದೊಂದಿಗೆ 675.60 ರೂ. ತಲುಪಿದೆ. ಟಾಟಾ ಮೋಟಾರ್ಸ್‌ನ ಷೇರುಗಳು ಸುಮಾರು 3 ರೂ.ಗಳಷ್ಟು ಇಳಿಕೆಯಾಗಿ 349.45 ರೂ., ರಿಲಯನ್ಸ್ ಷೇರು 20 ರೂ. ಇಳಿಕೆಗೊಂಡು 2,230.20 ರೂ.ಗೆ ಪ್ರಾರಂಭವಾಯಿತು.