Saturday, 23rd November 2024

38,079 ಹೊಸ ಕೋವಿಡ್ ಪ್ರಕರಣ ಪತ್ತೆ

#corona

ನವದೆಹಲಿ : ಕಳೆದ 24 ಗಂಟೆಗಳಲ್ಲಿ 38,079 ಹೊಸ ಕೋವಿಡ್ ಪ್ರಕರಣಗಳು ದಾಖಲಾದ ನಂತರ ಕಾಯಿಲೆಯ ಒಟ್ಟು ಸಂಖ್ಯೆ 31,064,908ಕ್ಕೆ ಏರಿಕೆ ಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವರದಿ ತಿಳಿಸಿದೆ.

ಶುಕ್ರವಾರ ಒಂದೇ ದಿನ ಕೊರೊನದಿಂದ 560 ಜನ ಮೃತಪಟ್ಟಿದ್ದು, ಈ ಸಂಖ್ಯೆ 4,13,091 ಕ್ಕೆ ಏರಿಕೆಯಾಗಿದೆ. 43,916 ಹೊಸ ಚೇತರಿಕೆಗಳು ವರದಿಯಾಗಿವೆ.

ಸಕ್ರಿಯ ಕೇಸ್ ಲೋಡ್ 6,397 ರಷ್ಟು ಕುಸಿತಕ್ಕೆ ಸಾಕ್ಷಿಯಾಯಿತು. ಹಿಂದಿನ ದಿನಕ್ಕಿಂತ ಸಾವಿನ ಸಂಖ್ಯೆ 18 ಹೆಚ್ಚಾಗಿದೆ. ದೇಶದಲ್ಲಿ ಈವರೆಗೆ ಕೋವಿಡ್-19 44,20,21,954 ಮಾದರಿಗಳನ್ನು ಪರೀಕ್ಷಿಸಲಾಗಿದೆ.