Friday, 13th December 2024

ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ಲಸಿಕೆ: ಆರೋಪಿ ಬಂಧನ

ಭೋಪಾಲ್​: ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ಲಸಿಕೆ ನೀಡಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ಉಡಾಫೆ ಉತ್ತರನ್ನು ನೀಡಿದ್ದ ಚುಚ್ಚು ಮದ್ದುಗಾರನನ್ನು ಮಧ್ಯ ಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಓರ್ವ ಮುಖ್ಯ ಲಸಿಕಾಧಿಕಾರಿ ಯನ್ನು ಸಹ ಅಮಾನತು ಮಾಡಲಾಗಿದೆ.

ಬಂಧಿತ ಚುಚ್ಚುಮದ್ದುಗಾರನ ಹೆಸರು ಜೀತೇಂದ್ರ. ಮಧ್ಯ ಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಅಧಿಕಾರಿಗಳು ಒಂದೇ ಒಂದು ಸಿರಿಂಜ್​ ಕಳುಹಿಸಿಕೊಟ್ಟಿದ್ದರು ಮತ್ತು ಅದರಲ್ಲೇ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವಂತೆ ವಿಭಾಗದ ಮುಖ್ಯಸ್ಥರು ಆದೇಶಿಸಿದರು ಎಂದು ಜೀತೇಂದ್ರ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್​ ಆದ ಬಳಿಕ ಮಧ್ಯಪ್ರದೇಶದ ಆರೋಗ್ಯ ಇಲಾಖೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಸಾಗರ್​ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶಿಬಿರದ ವೇಳೆ ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ಜೀತೇಂದ್ರ ಲಸಿಕೆ ನೀಡಿದ್ದ. ಒಂದು ಸಿರಿಂಜ್ ಅನ್ನು ಹಲವಾರು ಜನರಿಗೆ ಚುಚ್ಚುಮದ್ದು ಮಾಡಲು ಬಳಸಬಾರದು ಎಂದು ನಿಮಗೆ ತಿಳಿದಿದೆಯೇ ಎಂದು ಜೀತೇಂದ್ರನನ್ನು ಪ್ರಶ್ನಿಸಿದಾಗ, ಆತ ನನಗೆ ಅದು ತಿಳಿದಿದೆ. ಕೇವಲ ಒಂದು ಸಿರಿಂಜ್ ಅನ್ನು ಬಳಸಬೇಕೇ ಎಂದು ಆರೋಗ್ಯ ಅಧಿಕಾರಿಗಳನ್ನು ಕೇಳಿದೆ. ಅದಕ್ಕೆ ಅವರು ‘ಹೌದು’ ಎಂದು ಹೇಳಿದರು.