Saturday, 14th December 2024

ಶ್ರೀಕಾಳಹಸ್ತಿ: ಟ್ರಕ್-ಮಿನಿವ್ಯಾನ್ ಮುಖಾಮುಖಿ ಡಿಕ್ಕಿ- ನಾಲ್ವರ ಸಾವು

ತಿರುಪತಿ: ಜಿಲ್ಲೆಯ ಶ್ರೀಕಾಳಹಸ್ತಿಯ ರೇಣಿಗುಂಟಾ-ನಾಯ್ಡುಪೇಟ ಹೆದ್ದಾರಿ ಯಲ್ಲಿ ಟ್ರಕ್ ಮತ್ತು ಮಿನಿವ್ಯಾನ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.

12 ಮಂದಿಯ ತಂಡವೊಂದು ಚಿಲಕೂರು ಮಂಡಲದ ತುರುಪು ಕನುಪುರು ಗ್ರಾಮದ ಮುತ್ಯಾಲಮ್ಮ ದೇವಸ್ಥಾನದಲ್ಲಿ ದರ್ಶನ ಪಡೆದು ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಮಿನಿವ್ಯಾನ್ ಶ್ರೀಕಾಳಹಸ್ತಿಯ ಅರ್ಧ ನಾಧೀಶ್ವರ ದೇವಸ್ಥಾನಕ್ಕೆ ತಲುಪಿದಾಗ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆ ದಿದೆ.

ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ತಿರುಪತಿಯ ಎಸ್‌ವಿಆರ್‌ ರುಯಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಒಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡ ಇತರ ಎಂಟು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು.

ಶ್ರೀಕಾಳಹಸ್ತಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.