Wednesday, 11th December 2024

ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ನಾಲ್ವರ ಸಾವು

ಅಂಬಾಲಾ: ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಕಾರು ಕಾಲುವೆಗೆ ಬಿದ್ದ ಪರಿಣಾಮ ಪಂಜಾಬ್ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ಅಂಬಾಲಾ ನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ಇಸ್ಮಾಯಿಲ್‌ಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ನಂತರ ಮೃತದೇಹಗಳನ್ನು ನರ್ವಾನಾ ಶಾಖಾ ಕಾಲುವೆಯಿಂದ ಹೊರ ತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಕುಲದೀಪ್ ಸಿಂಗ್(48), ಅವರ ಪತ್ನಿ ಕುಲ್ಬೀರ್ ಕೌರ್(40), ಪುತ್ರ ಸುಖಪ್ರೀತ್(15) ಮತ್ತು ಪುತ್ರಿ ಜಶ್ನ್‌ದೀಪ್ ಕೌರ್(10) ಎಂದು ಗುರುತಿಸಲಾಗಿದೆ.