Saturday, 23rd November 2024

ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತ

ಮುಂಬೈ: ಷೇರುಪೇಟೆ ಸೆನ್ಸೆಕ್ಸ್ 400 ಪಾಯಿಂಟ್ಸ್ ಕುಸಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 18300 ಪಾಯಿಂಟ್ಸ್‌ಗಿಂತ ಕೆಳಗಿಳಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 456.09 ಪಾಯಿಂಟ್ಸ್ ಕುಸಿದು 61,259.96 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 152.20 ಪಾಯಿಂಟ್ಸ್ ಇಳಿಕೆಗೊಂಡು 18,266.60 ಪಾಯಿಂಟ್ಸ್‌ ಮುಟ್ಟಿದೆ. ದಿನದ ವಹಿವಾಟು ಆರಂಭದಲ್ಲಿ 877 ಷೇರುಗಳು ಏರಿಕೆಗೊಂಡರೆ, 2351 ಷೇರುಗಳು ಕುಸಿದವು ಮತ್ತು 115 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಭಾರ್ತಿ ಏರ್‌ಟೆಲ್, ಎಸ್‌ಬಿಐ, ಟಾಟಾ ಮೋಟಾರ್ಸ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ದಿನದಲ್ಲಿ ಏರಿಕೆಗೊಂಡ ಪ್ರಮುಖ ಷೇರುಗಳಾಗಿವೆ.

ಬ್ಯಾಂಕ್ ನಿಫ್ಟಿ ಬಲವಾಗಿ ಉಳಿಸಿಕೊಂಡಿದ್ದು, ನಿಫ್ಟಿ ಸ್ಮಾಲ್‌ಕ್ಯಾಪ್ 100 ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಶೇ. 5 ಕ್ಕಿಂತಲೂ ಹೆಚ್ಚು ಇಳಿಕೆಯಾಗಿವೆ ಮತ್ತು ಹಲವಾರು ಸ್ಟಾಕ್‌ಗಳು 10% ಕ್ಕಿಂತಲೂ ಕಡಿಮೆಯಾಗಿವೆ.