Friday, 13th December 2024

42ನೇ ಜಿಎಸ್’ಟಿ ಕೌನ್ಸಿಲ್ ಸಭೆ: ಸಾಲ ಪಡೆಯುವ ಮಿತಿ ಹೆಚ್ಚಳಕ್ಕೆ ಮಂಡಳಿ ಒಪ್ಪಿಗೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಸೋಮವಾರ 42ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಕೌನ್ಸಿಲ್ ಸಭೆ ನಡೆಯಿತು.

ಈ ಸಭೆಯಲ್ಲಿ ಸಾಲ ಪಡೆಯುವ ಮಿತಿಯನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ ಶೇ.2-3ರಷ್ಟು ದರ ಏರಿಕೆಯನ್ನು ಆಧರಿಸಿ ದರ ಏರಿಕೆ ಮಾಡಬೇಕು ಎಂದು ರಾಜ್ಯಗಳಿಗೆ ತಿಳಿಸಿದ್ದಾರೆ.

ರಾಜ್ಯಗಳಿಗೆ ಮೊದಲ ಸಾಲ ನೀಡುವ ಆಯ್ಕೆಯಲ್ಲಿ 97 ಸಾವಿರ ಕೋಟಿ ಬದಲು 1.1 ಲಕ್ಷ ಕೋಟಿ ರೂ.ಗಳ ಸಾಲ ಪಡೆಯುವ ಮಿತಿಯನ್ನು ಹೆಚ್ಚಿಸಲು ಜಿಎಸ್ ಟಿ ಮಂಡಳಿ ಒಪ್ಪಿಗೆ ನೀಡಿದೆ.  ಅಸಲು ಮತ್ತು ಬಡ್ಡಿಯನ್ನು ಪಾವತಿಸುವವರೆಗೆ ಲೆವಿ ಮುಂದು ವರಿಯುತ್ತದೆ. ಕಾಲಕಾಲಕ್ಕೆ ಪರಾಮರ್ಶೆ ಮತ್ತು ನಿರ್ಧಾರಮಾಡಲಾಗುತ್ತದೆ. ಆರಂಭಿಕ ಪ್ರಸ್ತಾವನೆಯು 2024ರವರೆಗೆ ಎರಡು ವರ್ಷಗಳಿಗೆ ವಿಸ್ತರಿಸಿತ್ತು.

ಆಗಸ್ಟ್ 27ರಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ, ರಾಜ್ಯಗಳು 97,000 ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆಯ ಬಹುದೆಂದು ಕೇಂದ್ರ ಸರ್ಕಾರ ಸಲಹೆ ಮಾಡಿತ್ತು.