ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 43,071 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. 52,299 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. 955 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೇರಳದಲ್ಲಿ ಶನಿವಾರ 12,456 ಮಂದಿ ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಅಲ್ಲಿ 9489 ಸೋಂಕು ಪ್ರಕರಣಗಳು ದೃಢವಾಗಿದೆ. ತಮಿಳುನಾಡಿನಲ್ಲಿ 4013 ಸೋಂಕು ಪ್ರಕರಣಗಳು, ಆಂಧ್ರ ಪ್ರದೇಶದಲ್ಲಿ 2930 ಸೋಂಕು ಪ್ರಕರಣಗಳು ಮತ್ತು ಒಡಿಶಾ ರಾಜ್ಯ ದಲ್ಲಿ 2917 ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಈ ಅವಧಿಯಲ್ಲಿ ದೇಶದಲ್ಲಿ 955 ಮಂದಿ ಸೋಂಕಿತರು ಮೃತಪಟ್ಟರೆ, ಈ ಪೈಕಿ, ಮಹಾರಾಷ್ಟ್ರದಲ್ಲೇ 371 ಮಂದಿ ಸೋಂಕಿತರು ಮರಣ ಹೊಂದಿದ್ದಾರೆ.