Tuesday, 10th December 2024

44 ಮಂದಿ ನಕ್ಸಲರು ಶರಣು

#Naxal_Chhattisgard

ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದ 9 ಮಹಿಳೆಯರು ಸೇರಿದಂತೆ 44 ಮಂದಿ ನಕ್ಸಲರು ಶರಣಾಗಿದ್ದಾರೆ.

ಇವರು ಚಿಂತಾಲ್​ನರ್​, ಕಿಸ್ಟಾರಾಮ್ ಮತ್ತು ಬೇಜಿ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿದ್ದರು ಎಂದು ಸುಕ್ಮಾ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಸುನಿಲ್​ ಶರ್ಮಾ ತಿಳಿಸಿದ್ದಾರೆ.

ಶರಣಾಗಿರುವ ನಕ್ಸಲರು ಸುಕ್ಮಾ ಜಿಲ್ಲೆಯ ಕರಿಗುಂಡಮ್​ ಹಳ್ಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಪೊಲೀಸ್‌ ಕ್ಯಾಂಪ್‌ನಲ್ಲಿ ಬೀಡು ಬಿಟ್ಟಿದ್ದಾರೆ.

44 ಮಂದಿ ನಕ್ಸಲರಲ್ಲಿ ಮಡ್ಕಮ್‌ ದುಲಾ ಎಂಬ ವ್ಯಕ್ತಿಗೆ ಸರ್ಕಾರ ₹ 2 ಲಕ್ಷ ಬಹುಮಾನ ಘೋಷಣೆ ಮಾಡಿತ್ತು. ಉಳಿದವರು ನಕ್ಸಲ್‌ ಸೇನಾ ಘಟಕ ಹಾಗೂ ಸಾಂಸ್ಕೃತಿಕ ಘಟಕದಲ್ಲಿ ಸಕ್ರಿಯರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.