Wednesday, 11th December 2024

ಕರೋನಾ: 44 ಮಂದಿ ಮಹಾಮಾರಿಗೆ ಬಲಿ

ವದೆಹಲಿ: ದೇಶದ ಕರೋನಾ ಏರಿಕೆ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದ್ದರೂ 44 ಮಂದಿ ಮಹಾಮಾರಿಗೆ ಬಲಿಯಾಗಿ ರುವುದು ಆತಂಕಕ್ಕೆ ಕಾರಣವಾಗಿದೆ.

7,533 ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿರುವುದದರಿಂದ ಒಟ್ಟಾರೆ ಸೋಂಕಿ ತರ ಸಂಖ್ಯೆ 4.49 ಕೋಟಿಗೆ ಏರಿಕೆಯಾಗಿದೆ. ಆದರೆ ಸಕ್ರಿಯ ಪ್ರಕರಣಗಳು 53,852 ಕ್ಕೆ ಇಳಿದಿದೆ.

44 ಸಾವುಗಳೊಂದಿಗೆ ಸಾವಿನ ಸಂಖ್ಯೆ 5,31,468 ಕ್ಕೆ ಏರಿದೆ, ಇದರಲ್ಲಿ 16 ಸಾವುಗಳು ಕೇರಳ ದಲ್ಲಿ ದಾಖಲಾಗಿರುವುದು ವಿಶೇಷ ವಾಗಿದೆ. ರಾಷ್ಟ್ರೀಯ ಕೋವಿಡ್ -19 ಚೇತರಿಕೆ ದರವು 98.69 ಪ್ರತಿಶತದಷ್ಟು ದಾಖಲಾಗಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,43,47,024 ಕ್ಕೆ ಏರಿದೆ, ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.18 ರಷ್ಟಿದೆ.

ರಾಷ್ಟ್ರವ್ಯಾಪಿ ಕೋವಿಡ್ -19 ಇನಾಕ್ಯುಲೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ದೇಶದಲ್ಲಿ ಒಟ್ಟು 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.