Saturday, 23rd November 2024

ಮುಂಬೈ ಷೇರುಪೇಟೆ: 450 ಅಂಕಗಳ ಕುಸಿತ

ಮುಂಬೈ: ಭಾರತದಲ್ಲಿ ಕರೋನಾ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ 450 ಅಂಕಗಳಷ್ಟು ಕುಸಿತ ಕಂಡಿದೆ.

ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 450 ಅಂಕ ಕುಸಿತ ಕಂಡಿದ್ದು, 48,050 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ, ನಿಫ್ಟಿ 14,400 ಅಂಕಗಳ ಗಡಿಗೆ ಕುಸಿದಿದೆ.

ಓಎನ್ಜಿಸಿ, ಎನ್ ಟಿಪಿಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೌಸಿಂಗ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೋರೇಶನ್ ಷೇರುಗಳು ಲಾಭಗಳಿಸಿವೆ. ಮಹೀಂದ್ರ ಆಯಂಡ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಮಾರುತಿ ಸುಜುಕಿ, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಟೆಕ್ ಮಹೀಂದ್ರ ಷೇರುಗಳು ನಷ್ಟ ಅನುಭವಿಸಿದೆ.