Wednesday, 11th December 2024

466 ಕೋಟಿ ರೂ. ವಂಚನೆ ಪ್ರಕರಣ: ಗೌತಮ್ ಥಾಪರ್’ಗೆ ಸಿಬಿಐ ’ಬಿಸಿ’

ನವದೆಹಲಿ: ಯೆಸ್ ಬ್ಯಾಂಕ್ ಗೆ 466 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ, ಸಿಬಿಐ ಬುಧವಾರ ಉದ್ಯಮಿ, ಅವಂತಾ ಗ್ರೂಪ್ ಸಂಸ್ಥಾಪಕ ಗೌತಮ್ ಥಾಪರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದೆ.

ಮೂಲಗಳ ಪ್ರಕಾರ, ಸಿಬಿಐ ಥಾಪರ್ ಗೆ ಸೇರಿದ ನಿವಾಸ, ಕಚೇರಿ ಸೇರಿದಂತೆ 20 ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದೆ.

ಗೌತಮ್ ಥಾಪರ್ ಸೇರಿದಂತೆ ರಘುಬೀರ್ ಕುಮಾರ್ ಶರ್ಮಾ, ರಾಜೇಂದ್ರ ಕುಮಾರ್ ಮಂಗಲ್, ತಾಪ್ಸಿ ಮಹಾಜನ್ ಮತ್ತು ಅವರ ಕಂಪನಿಗಳಾದ ಓಯಿಸ್ಟರ್ ಬಿಲ್ಡ್ ವೆಲ್ ಪ್ರೈ ಲಿಮಿಟೆಡ್, ಅವಂತ ರಿಯಾಲಿಟಿ ಪ್ರೈವೇಟ್ ಲಿಮಿಟೆಡ್ ಮತ್ತು ಜಾಬುವಾ ಪವರ್ ಲಿಮಿಟೆಡ್ ನ ಅಪರಿಚಿತ ಅಧಿಕಾರಿಗಳ ಹೆಸರನ್ನು ಪ್ರಕರಣದಲ್ಲಿ ಉಲ್ಲೇಖಿಸಿರುವುದಾಗಿ ವರದಿ ವಿವರಿಸಿದೆ.