ಮುಂಬೈ: ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಗುರುವಾರ ಭರ್ಜರಿ 514.33 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ದಾಖಲೆ ಮಟ್ಟದಲ್ಲಿ ಮುಕ್ತಾಯಗೊಳಿಸಿದೆ.
ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 514.33 ಅಂಕ ಏರಿಕೆಯೊಂದಿಗೆ 57,852.54 ಸಾರ್ವಕಾಲಿಕ ದಾಖಲೆಯೊಂದಿಗೆ ವಹಿವಾಟು ಕೊನೆಗೊಂಡಿದೆ. ಎನ್ ಎಸ್ ಇ ನಿಫ್ಟಿ ಕೂಡ 157.90 ಅಂಕ ಏರಿಕೆಯಾಗಿ, 17,234.15 ಅಂಕಗಳೊಂದಿಗೆ ದಾಖಲೆ ವಹಿವಾಟು ನಡೆಸಿದೆ.
ಟಿಸಿಎಸ್, ಎಚ್ ಯುಎಲ್, ಆಲ್ಟ್ರಾ ಟೆಕ್ ಸಿಮೆಂಟ್, ನೆಸ್ಲೆ ಇಂಡಿಯಾ, ಕೋಟಕ್ ಬ್ಯಾಂಕ್, ಡಾ.ರೆಡ್ಡೀಸ್ ಹಾಗೂ ಟೈಟಾನ್ ಷೇರುಗಳು ಶೇ.3ಕ್ಕಿಂತಲೂ ಅಧಿಕ ಲಾಭಗಳಿಸಿದೆ. ಜಾಗತಿಕವಾಗಿ ಶಾಂಘೈ, ಹಾಂಗ್ ಕಾಂಗ್ ಮತ್ತು ಟೋಕಿಯೋ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟು ನಡೆದಿದೆ.