Saturday, 23rd November 2024

ವಹಿವಾಟು ಅಂತ್ಯ: ಸೆನ್ಸೆಕ್ಸ್ 557 ಅಂಕಗಳ ಏರಿಕೆ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 557 ಪಾಯಿಂಟ್ಸ್ ಏರಿಕೆ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 168 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 557.63 ಪಾಯಿಂಟ್ ಏರಿಕೆಗೊಂಡು 48,944.14 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 168 ಪಾಯಿಂಟ್ ಏರಿಕೆಗೊಂಡು 14,653 ಪಾಯಿಂಟ್ಸ್ ಏರಿಕೆಗೊಂಡಿದೆ.

ದಿನದ ಅಂತ್ಯಕ್ಕೆ ಸುಮಾರು 1,915 ಷೇರುಗಳು ಪ್ರಗತಿ ಸಾಧಿಸಿದ್ದು, 984 ಷೇರುಗಳು ಕುಸಿದಿವೆ ಮತ್ತು 158 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.