Sunday, 3rd November 2024

ಹೈದರಾಬಾದ್’ನ ಚೆವಳ್ಳದಲ್ಲಿ ಅಪಘಾತ: ಮುಸ್ಲಿಂ ಕುಟುಂಬದ ಆರು ಮಂದಿ ಸಾವು

ಹೈದರಾಬಾದ್: ಕಾರು-ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಸ್ಲಿಂ ಕುಟುಂಬದ ಆರು ಜನರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೈದರಾಬಾದ್ ನಲ್ಲಿ ಸಂಭವಿಸಿದೆ.

ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈದರಾಬಾದ್ ನ ಚೆವಳ್ಳ ಎಂಬಲ್ಲಿ ಅಪಘಾತ ಸಂಭವಿಸಿದ್ದು, ಅದೃಷ್ಣವಶಾತ್ ಕಾರಿನಲ್ಲಿದ್ದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರನ್ನು ಆಸಿಫ್‌ ಖಾನ್(50), ನಾಜಿಯಾ ಬೇಗಂ(45), ನಾಜಿಯಾ ಬಾನೋ(36), ಸಾನಿಯಾ(17), ಅರ್ಶದ್(28)‌, ಅಸ್ರಾ ಬಾನೋ (6) ಎಂದು ಗುರುತಿಸಲಾಗಿದೆ. ಸಯ್ಯದ್ ಅಲಿ, ಬೇಗಂ, ನೌಶೀರ್‌ ಮತ್ತು ಅನ್ವರ್‌ ಖಾನ್‌ ಮಂತಾದವರಿಗೆ ಗಾಯಗಳಾ ಗಿವೆ. ಎಲ್ಲರೂ ಸಿಕಂದರಾಬಾದ್‌ನ ತಾಡ್ಬಂಡ್‌ ಪ್ರದೇಶದವರು ಎನ್ನಲಾಗಿದೆ.

ವಾಹನದಲ್ಲಿ 11 ಮಂದಿ ಇದ್ದು, ಇಂದು ಬೆಳಿಗ್ಗೆ ಟೊಯೋಟಾ ಇನ್ನೋವಾದಲ್ಲಿ ಕರ್ನಾಟಕದ ಯಾದಗಿರಿ ಜಿಲ್ಲೆಯಿಂದ ಗುರುಮಿಟ್ಕಲ್‌ಗೆ ಪ್ರಯಾಣ ಬೆಳೆಸಿದ್ದರು. ಚೆವಳ್ಳ ನಗರದ ಹೊರವಲಯದಲ್ಲಿರುವ ಕಂಡವಾಡಾ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.