ಪುಣೆ: ಪುಣೆಯ ಯರವಾಡ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಚಾವಣಿ ಕುಸಿದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.
ಯರವಾಡ ವ್ಯಾಪ್ತಿಯ ಶಾಸ್ತ್ರಿ ನಗರದ ಲೇನ್ ಸಂಖ್ಯೆ 8 ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯು ತ್ತಿತ್ತು. ಗುರುವಾರ ರಾತ್ರಿ ಕಟ್ಟಡದ ಚಾವಣಿ ಕುಸಿ ಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದುವರೆಗೆ ಆರು ಮಂದಿ ಮೃತಪಟ್ಟಿರುವುದು ತಿಳಿದುಬಂದಿದೆ. ಅವರ ದೇಹಗಳನ್ನು ಸಾಸೂನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ರಕ್ಷಣಾ ಕಾರ್ಯಾ ಚರಣೆ ನಡೆಯುತ್ತಿದೆ.