Monday, 11th November 2024

6 ಸಾವಿರದ 317 ಹೊಸ ಕರೋನಾ ಪ್ರಕರಣ ಪತ್ತೆ

covid

ನವದೆಹಲಿ: ಕೋವಿಡ್ ಮೂರನೇ ಅಲೆಯ ಈ ಹೊತ್ತಿನಲ್ಲಿ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6 ಸಾವಿರದ 317 ಹೊಸ ಕರೋನಾ ಪ್ರಕರಣಗಳು ವರದಿ ಯಾಗಿದ್ದು, ಸುಮಾರು 1 ಸಾವಿರದಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 6 ಸಾವಿರದ 317 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 78 ಸಾವಿರದ 190ಕ್ಕೆ ಇಳಿಕೆ ಆಗಿದೆ. ಕಳೆದ 24 ಗಂಟೆಗಳಲ್ಲಿ 6.906 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದುವರೆಗೆ ಒಟ್ಟಾರೆಯಾಗಿ 3 ಕೋಟಿಯ 42 ಲಕ್ಷದ 01 ಸಾವಿರದ 966 ಮಂದಿ ಗುಣಮುಖರಾಗಿದ್ದಾರೆ.

ಗುಣಮುಖ ಹೊಂದಿದವರ ಪ್ರಮಾಣ ಶೇ.98.40ರಷ್ಟಾಗಿದ್ದು ಕಳೆದ ವರ್ಷ ಮಾರ್ಚ್ ನಿಂದ ಅತಿ ಕಡಿಮೆ ಯಾಗಿದೆ. ದೇಶದ ಸಕ್ರಿಯ ಸೋಂಕಿತರ ಸಂಖ್ಯೆ 78 ಸಾವಿರದ 190 ಇದ್ದು ಕಳೆದ 575 ದಿನಗಳಲ್ಲಿ ಅತಿ ಕಡಿಮೆ ಯಾಗಿದೆ.

ಲಸಿಕಾ ಅಭಿಯಾನದ ನಂತರ ಇಲ್ಲಿಯವರೆಗೆ 138 ಕೋಟಿಯ 96 ಲಕ್ಷ ಡೋಸ್ ಲಸಿಕೆ ವಿತರಣೆಯಾಗಿದೆ.