Saturday, 14th December 2024

ಆತ್ಮನಿರ್ಭರ್ ಸ್ವಸ್ಥ ಭಾರತ್ ಯೋಜನೆಗೆ ಅನುಮೋದನೆ: 64,000 ಕೋಟಿ ರೂ. ಮೀಸಲು

ನವದೆಹಲಿ: ಕೇಂದ್ರ ಸಚಿವ ಸಂಪುಟವು ಬುಧವಾರ ಆತ್ಮನಿರ್ಭರ್ ಸ್ವಸ್ಥ ಭಾರತ್ ಯೋಜನೆಗೆ ಅನುಮೋದನೆ ನೀಡಿದ್ದು, 64,000 ಕೋಟಿ ರೂ.ಗಳನ್ನ ಮೀಸಲಿ ರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯೋಜನೆಯಡಿ, ಎಲ್ಲಾ ಜಿಲ್ಲೆಗಳು ಮತ್ತು 3,382 ಬ್ಲಾಕ್ʼಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಗಳನ್ನು ಸ್ಥಾಪಿಸಲಾಗುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಆರು ವರ್ಷಗಳಲ್ಲಿ ಸುಮಾರು 64,180 ಕೋಟಿ ರೂ.ಗಳ ವೆಚ್ಚಕ್ಕಾಗಿ 21-22ನೇ ಹಣಕಾಸು ವರ್ಷದ ಬಜೆಟ್ ಭಾಷಣದಲ್ಲಿ ಯೋಜನೆಯನ್ನು ಘೋಷಿಸಲಾಗಿದೆ.

ದೂರಸಂಪರ್ಕ, ವಾಹನ ಮತ್ತು ಆರೋಗ್ಯ ಎಂಬ ಮೂರು ದೊಡ್ಡ ವಲಯಗಳಿಗೆ ಪ್ಯಾಕೇಜ್ ಅನ್ನು ಕೇಂದ್ರವು ಅನುಮೋದಿಸಿದೆ.