Monday, 14th October 2024

ಗ್ಯಾಸ್ ಸಿಲಿಂಡರ್ ಸ್ಪೋಟ: 7 ಜನರು ಸಾವು

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು,  ಒಂದೇ ಕುಟುಂಬದ 7 ಜನರು ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದ ಗುನಾ ಜಿಲ್ಲೆಯ (ಮಧ್ಯಪ್ರದೇಶ) ಸುಮಾರು 15 ಜನರು ಇತ್ತೀಚೆಗೆ ಕೆಲಸಕ್ಕಾಗಿ ಅಹಮದಾಬಾದ್ ತಲುಪಿದ್ದರು. ಅಲ್ಲಿನ ಗೋಡಂಬಿ ಕಾರ್ಖಾನೆ ಯಲ್ಲಿ ಕೆಲಸ ಕಂಡುಕೊಂಡಿದ್ದರು. ಕುಟುಂಬದ ಸದಸ್ಯರು ಮಂಗಳವಾರ ರಾತ್ರಿ ಕಾರ್ಖಾನೆಯ ಕೋಣೆಯಲ್ಲಿ ಮಲಗಿದ್ದರು. ಆಗ ಎಲ್ ಪಿಜಿ ಸಿಲಿಂಡರ್ ಸ್ಪೋಟ ಗೊಂಡಿದ್ದು, 7 ಜನರು ಮೃತಪಟ್ಟಿದ್ದಾರೆ.

ಉಳಿದವರು ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರಲ್ಲಿ 4 ಜನರ ಶವಗಳು ಗ್ರಾಮಕ್ಕೆ ತಲುಪಿದ್ದು, ಅಂತ್ಯಕ್ರಿಯೆ ಮಾಡಲಾಗಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಮೃತರ ಸಂಬಂಧಿಕರಿಗೆ ಸಿಎಂ ಶಿವರಾಜ್ ಚೌಹಾಣ್ ತಲಾ 4 ಲಕ್ಷ ರೂ.ಮಕ್ಕಳ ಕುಟುಂಬಗಳಿಗೆ 2 ಲಕ್ಷ ರೂ., ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ.