Wednesday, 11th December 2024

ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ: ಭಾರಿ ಮಳೆಗೆ 70 ಮಂದಿ ಸಾವು

ನವದೆಹಲಿ : ಮಿಂಚು, ಗುಡುಗು ಮತ್ತು ಮಳೆಯಿಂದ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಕನಿಷ್ಠ 70 ಮಂದಿ ಮೃತ ಪಟ್ಟಿದ್ದು, ಹಲವರು ಗಾಯಗೊಂಡಿ ದ್ದಾರೆ.

ಉತ್ತರ ಪ್ರದೇಶದ ಹನ್ನೊಂದು ಜಿಲ್ಲೆಗಳಲ್ಲಿ ಕನಿಷ್ಠ 38 ಜನರು, ರಾಜಸ್ಥಾನದ ಜೈಪುರ, ಕೋಟಾ, ಝಾಲಾವರ್ ಮತ್ತು ಧೋಲ್ಪುರ್ ಜಿಲ್ಲೆಗಳಲ್ಲಿ ಪ್ರತ್ಯೇಕ ಮಿಂಚಿನ ಘಟನೆಗಳಲ್ಲಿ 7 ಮಕ್ಕಳು ಸೇರಿ ದಂತೆ 18 ಜನರು ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಹದಿನಾಲ್ಕು ಜನರು, ಕಾನ್ಪುರ ದೇಹತ್ ನಲ್ಲಿ ಐದು, ಫಿರೋಜಾಬಾದ್ ಮತ್ತು ಕೌಶಂಭಿಯಲ್ಲಿ ತಲಾ ಮೂವರು ಮತ್ತು ಉನ್ನಾವೋ ಮತ್ತು ಚಿತ್ರಕೂಟ್ ನಲ್ಲಿ ತಲಾ ಇಬ್ಬರು ಸಿಡಿಲು ಬಡಿದು ಮೃತಪಟ್ಟರು. ಮಧ್ಯ ದೇಶದಲ್ಲೂ ಸಿಡಿಲು ಬಡಿದು 14 ಜನರು ಮೃತಪಟ್ಟಿದ್ದಾರೆ.

ರಾಜಸ್ಥಾನದ ಪ್ರತ್ಯೇಕ ಹಳ್ಳಿಗಳಲ್ಲಿ ಸಿಡಿಲು ಬಡಿದು ಆರು ಮಕ್ಕಳು ಸೇರಿದಂತೆ 21 ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಸಿಡಿಲು ಬಡಿದು ಜನರು ಮೃತಪಟ್ಟ ಬಗ್ಗೆ ಪ್ರಧಾನಿ ಮೋದಿ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.