Saturday, 20th April 2024

7500ನೆ ಜನೌಷಧ ಕೇಂದ್ರ ಲೋಕಾರ್ಪಣೆ

ಜನೌಷಧ ಕೇಂದ್ರಗಳಲ್ಲಿ ಔಷಧ ಖರೀದಿಸಿ: ಮೋದಿ

ನವದೆಹಲಿ : ಔಷಧಗಳು ದುಬಾರಿಯಾಗಿವೆ. ಅದಕ್ಕಾಗಿಯೇ ನಮ್ಮಲ್ಲಿ ಪ್ರಧಾನ ಮಂತ್ರಿ ಜನೌಷಧಿ ಯೋಜನೆ ಇದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದು ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶಿಲ್ಲಾಂಗ್‍ನಲ್ಲಿ ದೇಶದ 7500ನೆ ಜನೌಷಧ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿ, ಕಡಿಮೆ ಬೆಲೆಗೆ ಅತ್ಯುತ್ತಮ ಔಷಧಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಮ್ಮ ಸರ್ಕಾರ ದೇಶದಾದ್ಯಂತ ಜನೌಷಧ ಕೇಂದ್ರಗಳನ್ನು ತೆರೆಯುತ್ತಿದೆ ಎಂದು ತಿಳಿಸಿದರು.

2014ರಲ್ಲಿ 84 ಜನೌಷಧ ಕೇಂದ್ರಗಳನ್ನು ತೆರೆಯಲಾಗಿತ್ತು. ಇಂದು ದೇಶದಾದ್ಯಂತ ಎಲ್ಲಾ ಜಿಲ್ಲಾ ಘಟಕಗಳನ್ನು ಗುರಿಯಾಗಿರಿಸಿ ಕೊಂಡು 7500 ಕೇಂದ್ರಗಳನ್ನು ದೇಶಾದ್ಯಂತ ತೆರೆಯಲಾಗಿದೆ ಎಂದು ಹೇಳಿದರು.

2021ರ ಮಾರ್ಚ್‍ವರೆಗೆ ಜನೌಷಧ ಕೇಂದ್ರಗಳಲ್ಲಿ ಲಕ್ಷಾಂತರ ಔಷಧಗಳನ್ನು ಬಡವರಿಗೆ ತಲುಪಿಸಲಾಗಿದ್ದು, ಇದರಿಂದ 3,600 ಕೋಟಿ ರೂ.ಗಳಷ್ಟು ಹಣ ಉಳಿತಾಯ ಮಾಡಲಾಗಿದೆ ಎಂದು ಅವರು ಹೇಳಿದರು. ಸೇವೆಯ ಜತೆಗೆ ಕೆಲಸವೂ ಮಾಡುವ ಘೋಷಣೆಯೊಂದಿಗೆ ಮಾ.1ರಿಂದ ಮಾ.7ರವರೆಗೆ ದೇಶದಾದ್ಯಂತ ಜನೌಷಧ ವಾರ ಆಚರಿಸಲಾಗುತ್ತಿದೆ.

ಜನೌಷಧ ದಿನಾಚರಣೆಯ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಮೋದಿ ಕಿ ದುಖಾನ್ ಎಂದು ಕರೆಯಲ್ಪಡುವ ಜನೌಷಧಿ ಮಳಿಗೆಗಳಲ್ಲಿ ಔಷಧಿ ಖರೀದಿಸಿ ಎಂದು ಹೇಳಿದ್ದಾರೆ.

ಶಿಲ್ಲಾಂಗ್ ನಲ್ಲಿ 7,500 ನೇ ಜೌಷಧಿ ಕೇಂದ್ರವನ್ನು ಉದ್ಘಾಟಿಸಿದ ಮೋದಿ, ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವಂತೆ ಮಾಡಲು ನಿರ್ಧರ ಮಾಡಿರುವುದಾಗಿ ಹೇಳಿದರು. 11 ಕೋಟಿಗೂ ಅಧಿಕ ಸ್ಯಾನಿಟರಿ ನ್ಯಾಪ್ ಕಿನ್ ಗಳು ಜನೌಷಧಿ ಕೇಂದ್ರಗಳಲ್ಲಿ ಮಾರಾಟ ವಾಗಿದೆ. 25 ರೂ.ಗೆ ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳು ಸಿಗುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!