Wednesday, 11th December 2024

ಕರೋನಾ ಸೋಂಕು: 752 ಪ್ರಕರಣ ಪತ್ತೆ

ವದೆಹಲಿ: ದೇಶದಲ್ಲಿ 752 ಕರೋನಾ ಸೋಂಕುಗಳ ಒಂದು ದಿನದ ಏರಿಕೆ ಕಂಡಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,420 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ನಾಲ್ಕು ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,33,332 ಕ್ಕೆ ದಾಖಲಾಗಿದೆ. ಕೇರಳದಿಂದ ಇಬ್ಬರು, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ತಲಾ ಒಬ್ಬರು ಕರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ದೇಶದ ಕೋವಿಡ್ ಪ್ರಕರಣಗಳ ಸಂಖ್ಯೆ 4.50 ಕೋಟಿ (4,50,07,964)ಗೆ ಏರಿಕೆಯಾಗಿದೆ.

ರೋಗದಿಂದ ಚೇತರಿಸಿಕೊಂಡ ಜನರ ಸಂಖ್ಯೆ 4,44,71,212 ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇ.1.19 ರಷ್ಟಿದೆ. ದೇಶದಲ್ಲಿ ಇದುವರೆಗೆ 220.67 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯದ ವೆಬ್‍ಸೈಟ್ ತಿಳಿಸಿದೆ.