Wednesday, 11th December 2024

ಎತ್ತರಕ್ಕೆ ಜಿಗಿದ ಷೇರುಪೇಟೆ: ಸೆನ್ಸೆಕ್ಸ್ 789 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಬುಧವಾರ ಭಾರತೀಯ ಷೇರುಪೇಟೆ ಮತ್ತಷ್ಟು ಎತ್ತರಕ್ಕೆ ಜಿಗಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 789 ಪಾಯಿಂಟ್ಸ್‌ ಏರಿಕೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 211 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 789.70 ಪಾಯಿಂಟ್ಸ್‌ ಹೆಚ್ಚಾಗಿ 49733.84 ಪಾಯಿಂಟ್ಸ್‌, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 211.50 ಪಾಯಿಂಟ್ಸ್‌ ಹೆಚ್ಚಾಗಿ 14864.50 ಪಾಯಿಂಟ್ಸ್‌ ದಾಖಲಾಗಿದೆ. ದಿನದ ವಹಿವಾಟು ಅಂತ್ಯಕ್ಕೆ 1,730 ಷೇರುಗಳು ಏರಿಕೆಗೊಂಡರೆ, 1180 ಷೇರುಗಳು ಕುಸಿದಿವೆ ಮತ್ತು 170 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎನ್‌ಎಸ್‌ಇನಲ್ಲಿ ಬಜಾಜ್ ಫೈನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಈಚರ್ ಮೋಟಾರ್ಸ್, ಬಜಾಜ್ ಫಿನ್‌ಸರ್ವ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಲಾಭಗಳಿಸಿದ್ದು, ಬ್ರಿಟಾನಿಯಾ ಇಂಡಸ್ಟ್ರೀಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ನೆಸ್ಲೆ, ಡಿವಿಸ್ ಲ್ಯಾಬ್ಸ್ ಮತ್ತು ಎಚ್‌ಡಿಎಫ್‌ಸಿ ಲೈಫ್ ಇಳಿಕೆಗೊಂಡಿವೆ.

ಆಮ್ಲಜನಕ ಲಭ್ಯವಾಗುವಂತೆ ಮಾಡಲು ಮಾರುತಿ ಸುಜುಕಿ ತನ್ನ ಹರಿಯಾಣದ ಕಾರ್ಖಾನೆ ಮುಚ್ಚಿದ್ದು, ಸುಜುಕಿ ಮೋಟಾರ್ ತನ್ನ ಗುಜರಾತ್‌ ಘಟಕವನ್ನು ಮುಚ್ಚಿದೆ.