Wednesday, 11th December 2024

ತೈಲ ಬೆಲೆ ಏರಿಕೆ: ಸೆನ್ಸೆಕ್ಸ್ 800 ಅಂಕ ಇಳಿಕೆ

ಮುಂಬೈ: ರಷ್ಯಾ, ಉಕ್ರೇನ್ ನಡುವಿನ ಯುದ್ಧ ತೀವ್ರಗೊಂಡಿರುವುದು ಹಾಗೂ ಕಚ್ಛಾ ತೈಲ ಬೆಲೆ ಏರಿಕೆಯ ಪರಿಣಾಮ ಬುಧವಾರ (ಮಾರ್ಚ್ 02) ಮುಂಬೈ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 800ಕ್ಕೂ ಅಧಿಕ ಅಂಕ ಇಳಿಕೆಯಾಗಿದೆ.

ಮುಂ ಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 871.71 ಅಂಕ ಇಳಿಕೆಯಾಗಿದ್ದು, 55,375.20 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 175.30 ಅಂಕ ಕುಸಿತವಾಗಿದ್ದು, 16,600 ಅಂಕಗಳ ಮಟ್ಟ ತಲುಪಿದೆ.

ಸೆನ್ಸೆಕ್ಸ್, ನಿಫ್ಟಿ ಇಳಿಕೆಯ ಪರಿಣಾಮ ಬಜಾಜ್ ಆಟೋ ಲಿಮಿಟೆಡ್, ಏಷ್ಯನ್ ಪೇಂಟ್ಸ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಮಾರುತಿ ಸುಜುಕಿ ಇಂಡಿಯಾ, ಭಾರತ್ ಫೋರ್ಜ್ ಲಿಮಿಟೆಡ್, ಎಚ್ ಡಿಎಫ್ ಸಿ ಬ್ಯಾಂಕ್, ಹೀರೋ ಮೋಟಾರ್ಸ್ ಷೇರುಗಳ ಮೌಲ್ಯ ನಷ್ಟ ಕಂಡಿದೆ.

ಮತ್ತೊಂದೆಡೆ ಟಾಟಾ ಸ್ಟೀಲ್, ನೆಸ್ಲೆ, ಪವರ್ ಗ್ರಿಡ್, ಟೆಕ್ ಮಹೀಂದ್ರ, ಟಿಸಿಎಸ್ ಮತ್ತು ಎನ್ ಟಿಪಿಸಿ ಷೇರುಗಳು ಲಾಭ ಗಳಿಸಿವೆ. ಕಚ್ಛಾ ತೈಲ ಬೆಲೆ ಏರಿಕೆ, ರಷ್ಯಾ, ಉಕ್ರೇನ್ ಯುದ್ಧ ಹೂಡಿಕೆದಾರರ ಮೇಲೆ ಪರಿಣಾಮ ಬೀರಿರುವು ದಾಗಿ ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.