Saturday, 14th December 2024

ಪ.ಬಂಗಾಳ ಕೊನೆಯ ಹಂತದ ಮತದಾನ: 16.04ರಷ್ಟು ಮತ ಚಲಾವಣೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ 35 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಅಂತಿಮ ಮತ್ತು ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಇದುವರೆಗಿನ ವರದಿ ಪ್ರಕಾರ ಶೇಕಡಾ 16.04ರಷ್ಟು ಮತದಾನವಾಗಿದೆ.

ತೃಣಮೂಲ ಕಾಂಗ್ರೆಸ್ ನ ಬಿರ್ಬಿಮ್ ಜಿಲ್ಲೆಯ ಅಧ್ಯಕ್ಷ ಅನುಬ್ರತ ಮೊಂಡಲ್ ಅವರ ವಿರುದ್ಧ ಹಲವು ದೂರುಗಳು ಇರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲನ್ನು 7 ಗಂಟೆಯವರೆಗೆ ಚುನಾವಣಾ ಆಯೋಗ ಇರಿಸಿದೆ. ಬಿರ್ಬಿಮ್ ಜಿಲ್ಲೆಯ ಮತಗಟ್ಟೆ ಸಂಖ್ಯೆ 188ರಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದು ಮತದಾನ ಅರ್ಧಗಂಟೆ ತಡವಾಗಿ ಆರಂಭವಾಯಿತು.

ಬಿಜೆಪಿ ನಾಯಕ, ನಟ ಮಿಥುನ್ ಚಕ್ರವರ್ತಿ ಉತ್ತರ ಕೋಲ್ಕತ್ತಾದ ಕಾಶಿಪುರ್-ಬೆಲ್ಗಚಿಯಾದಲ್ಲಿ ಮತ ಚಲಾ ಯಿಸಿ ಈ ಹಿಂದೆ ನಾನು ಯಾವತ್ತೂ ಇಷ್ಟೊಂದು ಶಾಂತಿಯುತವಾಗಿ ಮತದಾನ ಮಾಡಿರಲಿಲ್ಲ, ಭದ್ರತಾ ಸಿಬ್ಬಂದಿಗೆ ಅಭಿನಂದನೆಗಳು ಎಂದರು.

ಉತ್ತರ ಕೋಲ್ಕತ್ತಾದ ಮಹಾಜತಿ ಸದನ್ ಆಡಿಟೋರಿಯಂ ಸಮೀಪ ಬಾಂಬ್ ನ್ನು ಎಸೆಯಲಾಗಿದ್ದು ಚುನಾವಣಾ ಆಯೋಗ ಘಟನೆ ಬಗ್ಗೆ ವರದಿ ಕೇಳಿದೆ.