Friday, 13th December 2024

ಟಿಎಂಸಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿಯಾಗಿ ಅಭಿಷೇಕ್ ಬ್ಯಾನರ್ಜಿ ಮರು ನೇಮಕ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಶುಕ್ರವಾರ ಸೋದರ ಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯನ್ನಾಗಿ ಮರು ನೇಮಕ ಮಾಡಿದ್ದಾರೆ.

ಹಿರಿಯ ಮುಖಂಡ ಯಶವಂತ ಸಿನ್ಹಾ ಅವರನ್ನು ಅದರ ಉಪಾಧ್ಯಕ್ಷರನ್ನಾಗಿ ನೇಮಿಸಿ ದ್ದಾರೆ.

ಟಿಎಂಸಿ ಹಿರಿಯ ಮುಖಂಡ ಸುಬ್ರಾತಾ ಬಕ್ಷಿ ಮತ್ತು ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಕೂಡಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಸಚಿವ ಅರೂಪ್ ಬಿಸ್ವಾಸ್ ಅವರನ್ನು ಖಜಾಂಚಿಯಾಗಿ, ಕೊಲ್ಕತ್ತಾ ಮೇಯರ್ ಪರ್ಹದ್ ಹಕೀಂ ಅವರಿಗೆ ಸಮನ್ವಯತೆಯ ಹೊಣೆ ನೀಡಿದ್ದಾರೆ.

ಕಳೆದ ವಾರ ಪಕ್ಷದ ಮುಖಂಡರ ನಡುವೆ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ರಾಷ್ಟ್ರೀಯ ಪದಾಧಿಕಾರಿಗಳ ಸಮಿತಿಯನ್ನು ಮಮತಾ ಬ್ಯಾನರ್ಜಿ ವಜಾಗೊಳಿಸಿದ್ದರು. ನಂತರ ಪಕ್ಷದ ಮುಖಂಡರನ್ನೊಳಗೊಂಡಂತೆ 20 ಸದಸ್ಯ ಕಾರ್ಯಕಾರಿ ಸಮಿತಿ ರಚಿಸಿದ್ದರು.