Saturday, 14th December 2024

Aadhaar New Rule: ಆಧಾರ್‌ಗೆ ಸಂಬಂಧಿಸಿ ಜಾರಿಯಾಗಿದೆ ಹೊಸ ನಿಯಮ!

Aadhaar New Rule

ಹಣಕಾಸು ಮತ್ತು ತೆರಿಗೆಗೆ (Finance and Taxation) ಸಂಬಂಧಿಸಿ ಅಕ್ಟೋಬರ್ 1ರಿಂದ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಇದರ ಅನ್ವಯ ಇನ್ನು ಮುಂದೆ ಪಾನ್ ಕಾರ್ಡ್ (PAN card) ವಿತರಣೆ ಅಥವಾ ಆದಾಯ ತೆರಿಗೆ ರಿಟರ್ನ್ (income tax return filings) ಫೈಲ್ ಮಾಡಬೇಕಾದರೆ ಆಧಾರ್ ಐಡಿಗೆ (Aadhaar New Rule) ಸಂಬಂಧಿಸಿ ಕೆಲವು ಬದಲಾವಣೆ ಎದುರಿಸಬೇಕಾಗುತ್ತದೆ.

ಆಧಾರ್ ಐಡಿ ಎಂದರೇನು?

ಆಧಾರ್ ಐಡಿಯು ಆಧಾರ್ ನೋಂದಣಿ ಸಮಯದಲ್ಲಿ ನೀಡಿರುವ ವಿಶಿಷ್ಟವಾದ ಗುರುತಿಸುವಿಕೆಯಾಗಿದೆ. ಅಧಿಕೃತ ಆಧಾರ್ ಸಂಖ್ಯೆಯನ್ನು ನೀಡುವವರೆಗೆ ಆಧಾರ್ ಅಪ್ಲಿಕೇಶನ್‌ನ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಇದನ್ನು ಬಳಸಲಾಗುತ್ತದೆ. ಈ ಐಡಿಯು 14 ಅಂಕಿಯ ಸಂಖ್ಯೆ ಮತ್ತು 14 ಅಂಕಿಯ ದಿನಾಂಕ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದು ನೋಂದಣಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

Aadhaar New Rule

ಏನು ಬದಲಾವಣೆ?

ಆಧಾರ್ ಸಂಖ್ಯೆಯ ಬದಲಿಗೆ ಆಧಾರ್ ನೋಂದಣಿ ಐಡಿಯನ್ನು ಬಳಸುವ ಆಯ್ಕೆಯನ್ನು ಕೇಂದ್ರ ಸರ್ಕಾರವು ಅಕ್ಟೋಬರ್ 1ರಿಂದ ನಿಲ್ಲಿಸಿದೆ. ಇದರಿಂದ ಇನ್ನು ಮುಂದೆ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಅಥವಾ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ವ್ಯಕ್ತಿಗಳು ತಮ್ಮ ಆಧಾರ್ ದಾಖಲಾತಿ ಐಡಿಯನ್ನು ಒದಗಿಸುವ ಅಗತ್ಯವಿರುವುದಿಲ್ಲ.

ಘೋಷಣೆಯಾಗಿದ್ದು ಯಾವಾಗ?

ಕೇಂದ್ರ ಬಜೆಟ್ 2024ರಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ತೆರಿಗೆ ಉದ್ದೇಶಗಳಿಗಾಗಿ ಆಧಾರ್ ಸಂಖ್ಯೆಯ ಬದಲಿಗೆ ಆಧಾರ್ ನೋಂದಣಿ ಐಡಿಯನ್ನು ಉಲ್ಲೇಖಿಸುವ ಆಯ್ಕೆಯನ್ನು ನಿಲ್ಲಿಸುವುದಾಗಿ ಘೋಷಿಸಿದರು. ಆಧಾರ್ ದಾಖಲಾತಿ ಐಡಿಯನ್ನು ಆಧರಿಸಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುವವರು ತಮ್ಮ ಆಧಾರ್ ಸಂಖ್ಯೆಯನ್ನು ಆದಾಯ ತೆರಿಗೆ ಅಧಿಕಾರಿಗಳು ಸೂಚಿಸಿದ ದಿನಾಂಕದೊಳಗೆ ಒದಗಿಸಬೇಕು ಎಂದು ತಿಳಿಸಿದ್ದರು. ಪಾನ್ ಕಾರ್ಡ್ ವಿತರಣೆ ಮತ್ತು ಆದಾಯ ರಿಟರ್ನ್‌ಗಾಗಿ ಅರ್ಜಿ ನಮೂನೆಯಲ್ಲಿ ಆಧಾರ್ ದಾಖಲಾತಿ ಐಡಿಯನ್ನು ಉಲ್ಲೇಖಿಸಲು ಅನುಮತಿಸುವ ನಿಬಂಧನೆಗಳನ್ನು 2017ರಲ್ಲಿ ಪರಿಚಯಿಸಲಾಗಿತ್ತು.

Google Gemini : ಗೂಗಲ್ ಜೆಮಿನಿಯಲ್ಲಿ ಈಗ ಕನ್ನಡ ಸೇರಿದಂತೆ 7 ಭಾಷೆ ಲಭ್ಯ

ಅಂದಿನಿಂದ ಸಾಕಷ್ಟು ಮಂದಿ ಇದನ್ನು ಬಳಸುತ್ತಿದ್ದರು ಮಾತ್ರವಲ್ಲದೆ ಇದು ನಿರಂತರ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಆಧಾರ್ ಅರ್ಜಿ ನಮೂನೆಯ ದಾಖಲಾತಿ ಐಡಿಯನ್ನು ಉಲ್ಲೇಖಿಸುವ ಆಯ್ಕೆಯನ್ನು ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಯಾಕೆಂದರೆ ಇದು ಪಾನ್ ಕಾರ್ಡ್‌ನ ನಕಲು ಅಥವಾ ದುರುಪಯೋಗಕ್ಕೆ ಕಾರಣವಾಗಬಹುದು ಎನ್ನುವ ಆತಂಕ ಉಂಟಾಗಿದೆ.