Wednesday, 11th December 2024

ಆಧಾರ್ ಕಾರ್ಡ್ ರಾಷ್ಟ್ರೀಯ ಪೌರತ್ವ ಪ್ರಮಾಣಪತ್ರವಲ್ಲ: ಕಿರಣ್ ರಿಜುಜು

ನವದೆಹಲಿ : ಕೇಂದ್ರ ನ್ಯಾಯಾಂಗ ಸಚಿವ ಕಿರಣ್ ರಿಜುಜು, ಆಧಾರ್ ಕಾರ್ಡ್ ಇದ್ದ ಮಾತ್ರಕ್ಕೆ ಅದು ರಾಷ್ಟ್ರೀಯ ಪೌರತ್ವ ಪ್ರಮಾಣಪತ್ರವಲ್ಲ ಎಂದು ಲೋಕಸಭೆಗೆ ಸ್ಪಷ್ಟಪಡಿಸಿದ್ದಾರೆ. ಆಧಾರ್ ಪೌರತ್ವದ ಮಾನ್ಯತೆಯಾಗಿದೆ. ಆಧಾರ್ ಕಾರ್ಡ್ ಇದ್ದ ಮಾತ್ರಕ್ಕೆ ಪೌರತ್ವವಿದೆ ಎಂದು ಹೇಳಲಾಗದು.

ಭ್ರಷ್ಟಾಚಾರದಿಂದಾಗಿ ಅನೇಕ ಅಕ್ರಮ ವಲಸಿಗರು ಆಧಾರ್ ಕಾರ್ಡ್‌ಗಳನ್ನ ಪಡೆದಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.  ಇತರ ದೇಶಗಳ ಜನರು ಆಧಾರ್ ಕಾರ್ಡ್‌ಗಳನ್ನ ಪಡೆದು ಪಾಸ್‌ ಪೋರ್ಟ್‌ಗಳು ಮತ್ತು ಇತರ ಪೌರತ್ವ ಪ್ರಮಾಣಪತ್ರಗಳನ್ನ ಪಡೆದಿರುವ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಬೆಳೆಯುತ್ತಿರುವ ಆಧಾರ್ ಕಾರ್ಡ್ ಭಾರತೀಯ ಪ್ರಜೆ ಎಂಬ ಗ್ರಹಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅಕ್ರಮವಾಗಿ ವಲಸೆ ಬಂದವರು, ಅಕ್ರಮ ಮಾರ್ಗಗಳ ಮೂಲಕ ಆಧಾರ್ ಕಾರ್ಡ್ ಪಡೆಯುವುದು ಮತ್ತು ಭಾರತೀಯ ಪ್ರಜೆಯಾಗಿ ಶಾರ್ಟ್‌ಕಟ್‌ಗಳನ್ನ ಆಯ್ಕೆ ಮಾಡುವುದು ಅಪರಾಧ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರತಿಯೊಬ್ಬ ಮತದಾರರು ತಮ್ಮ ಆಧಾರ್ ಸಂಖ್ಯೆಯೊಂದಿಗೆ ಮತದಾರರ ಕಾರ್ಡ್ ಸಂಖ್ಯೆಯನ್ನ ಲಿಂಕ್ ಮಾಡಬೇಕು. ಆದರೆ, ಇದು ಸ್ವಯಂಪ್ರೇರಿತ ಎಂದು ಕೇಂದ್ರ ಹೇಳಿದೆ.

ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಮಾನ್ಯವಾಗಿರುತ್ತದೆ. ಮತದಾರರ ಚೀಟಿ ಇಲ್ಲದೇ ಮತ ಚಲಾಯಿಸುವಂತಿಲ್ಲ. ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವಂತಿಲ್ಲ, ಪಾಸ್ ಪೋರ್ಟ್ ಇಲ್ಲದೆ ವಿದೇಶಕ್ಕೆ ಹೋಗುವಂತಿಲ್ಲ. ಆದರೆ, ಆಧಾರ್ ಕಾರ್ಡ್ ಇಲ್ಲದೇ ಯಾವುದೇ ಕೆಲಸ ಮಾಡು ವಂತಿಲ್ಲ. ಆಧಾರ್ ವಿಚಾರದಲ್ಲಿ ಕೇಂದ್ರ ನೀಡಿರುವ ಇತ್ತೀಚಿನ ಹೇಳಿಕೆ ಆಧಾರ್ ಹೊಂದಿದ್ದರೆ ಪೌರತ್ವ ಪಡೆಯಬಹುದು ಎಂದು ಸ್ಪಷ್ಟಪಡಿಸಿದಂತಿದೆ.