ನವದೆಹಲಿ: ಸರ್ಕಾರಿ ಪೋರ್ಟಲ್ ಮೂಲಕ ಆಧಾರ್ ನವೀಕರಣದ ಗಡುವನ್ನು ವಿಸ್ತರಿಸಿದೆ. ಮೈ ಆಧಾರ್ ಪೋರ್ಟಲ್ ಮೂಲಕ ತಮ್ಮ ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸಲು ಜನರಿಗೆ ಹೆಚ್ಚಿನ ಸಮಯವನ್ನು ನೀಡುವ ವಿಸ್ತರಣೆಯನ್ನು ಪ್ರಾಧಿಕಾರ ಹೊರಡಿಸಿದೆ.
ಯುಐಡಿಎಐ ಡಿಸೆಂಬರ್ 11ರಂದು ಕಚೇರಿ ಜ್ಞಾಪಕ ಪತ್ರವನ್ನು ಹೊರಡಿಸಿತು, ವಿಸ್ತರಣೆಯ ಬಗ್ಗೆ ಮಾಹಿತಿ ನೀಡಿತು. ದೇಶದ ಜನತೆಯಿಂದ ಆಧಾರ್ ತಿದ್ದುಪಡಿಗೆ ಗಡುವು ವಿಸ್ತರಣೆ ಮಾಡುವಂತೆ ಮನವಿಗಳನ್ನು ಸ್ವೀಕರಿಸಲಾಯಿತು. ಈ ಹಿನ್ನಲೆಯಲ್ಲಿ ಇನ್ನೂ 3 ತಿಂಗಳು ಅಂದರೆ ಡಿ.15ರಿಂದ 14.03.2024 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.
ವಿವರಗಳ ಆನ್ಲೈನ್ ನವೀಕರಣ ಉಚಿತವಾಗಿದೆ. ಆದರೆ ಭೌತಿಕ ಆಧಾರ್ ಕೇಂದ್ರಗಳಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಲು ವ್ಯಕ್ತಿಗಳಿಗೆ 25 ರೂ ಶುಲ್ಕ ವಿಧಿಸಲಾಗುತ್ತದೆ.
ಕಳೆದ 10 ವರ್ಷಗಳಲ್ಲಿ ಆಧಾರ್ ವಿವರಗಳನ್ನು ಪರಿಷ್ಕರಿಸದಿದ್ದರೆ ಅದನ್ನು ಪರಿಷ್ಕರಿಸುವಂತೆ ಅಧಿಕಾರಿಗಳು ಸಾರ್ವಜನಿಕರನ್ನು ಒತ್ತಾಯಿಸುತ್ತಿದ್ದಾರೆ.