Friday, 4th October 2024

ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್: ಒಂಬತ್ತು ಸ್ಥಾನಗಳಲ್ಲಿ ಆಪ್‌ ಮುನ್ನಡೆ

ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದೆ.

ಪ್ರತಿಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಮುಂದಿದೆ. ಬಿಜೆಪಿ ಆರು ಹಾಗೂ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿವೆ.

ಮೇಯರ್ ಬಿಜೆಪಿಯ ರವಿಕಾಂತ್ ಶರ್ಮಾ ಅವರು ಎಎಪಿ ಅಭ್ಯರ್ಥಿ ದಮನ್‌ಪ್ರೀತ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ಪಂಜಾಬ್ ಹಾಗೂ ಹರ್ಯಾಣದ ರಾಜಧಾನಿ ಚಂಡೀಗಢದಲ್ಲಿ 35 ಹೊಸ ಮುನ್ಸಿಪಲ್ ಕೌನ್ಸಿಲರ್‌ಗಳಿಗೆ ಶುಕ್ರವಾರ ಚುನಾವಣೆ ನಡೆದಿತ್ತು.

ಚುನಾವಣೆಯಲ್ಲಿ ಮೊದಲ ಬಾರಿಗೆ ಎಎಪಿ ಸ್ಪರ್ಧಿಸಿದ್ದು, ಎಎಪಿ ಸಾಧನೆಯು ಮುನ್ಸಿಪಲ್ ನಲ್ಲಿ ಬಹುಮತ ಹೊಂದಿರುವ ಬಿಜೆಪಿಗೆ ಅಚ್ಚರಿ ಮೂಡಿಸಿದೆ.

ಈ ಬಾರಿಯ ಚುನಾವಣೆಯು ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್, ಎಎಪಿ, ಬಿಜೆಪಿ ಹಾಗೂ ಅಕಾಲಿದಳ-ಬಿಎಸ್‌ಪಿ ಮೈತ್ರಿಕೂಟದ ನಡುವಿನ ಚತುಷ್ಕೋನ ಸ್ಪರ್ಧೆಯಾಗಿದೆ.