Saturday, 14th December 2024

ಎಎಪಿ ಶಾಸಕ ಸೋಮನಾಥ್ ಭಾರ್ತಿ ಬಂಧನ

ಲಖನೌ: ಆಮ್ ಅದ್ಮಿ ಪಕ್ಷದ(ಎಎಪಿ) ಶಾಸಕ ಸೋಮನಾಥ್ ಭಾರ್ತಿ ಅವರನ್ನು ಸೋಮವಾರ ಅಮೆಥಿಯಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶದ ಆಸ್ಪತ್ರೆಗಳ ಸ್ಥಿತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪವನ್ನು ಶಾಸಕರು ಎದುರಿಸುತ್ತಿದ್ದಾರೆ.

ಸೋಮನಾಥ್ ಭಾರ್ತಿ ಅವರು ರಾಯಬರೇಲಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಾತನಾ ಡುತ್ತಿದ್ದಾಗ ಅವರ ಮೇಲೆ ಕಪ್ಪು ಶಾಯಿ ಎರಚಲಾಗಿತ್ತು. ಘಟನೆಯ ನಂತರ ಅಮೆಥಿಗೆ ಭೇಟಿ ನೀಡಿದ ಭಾರತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಮೆಥಿ ಮತ್ತು ರಾಯಬರೇಲಿ ಪ್ರವಾಸದಲ್ಲಿರುವ ಭಾರ್ತಿ, ಉತ್ತರ ಪ್ರದೇಶ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಅವರನ್ನು ಅಮೆಥಿ ಅತಿಥಿ ಗೃಹದಲ್ಲಿ ಬಂಧಿಸಲಾಗಿದೆ.