ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯಲ್ಲಿ ಭ್ರಷ್ಟಾಚಾರ ದಿಂದಾಗಿ ಉಸಿರುಗಟ್ಟುವಿಕೆಯ ವಾತಾವರಣ ಸೃಷ್ಟಿಯಾಗಿದೆ ಎಂದು ಪವನ್ ಆರೋಪಿಸಿ ದ್ದಾರೆ.
‘ಎಂಸಿಡಿಯಲ್ಲಿ ಗದ್ದಲ ಸೃಷ್ಟಿಸಲು ಎಎಪಿ ಕೌನ್ಸಿಲರ್‌ಗಳಿಗೆ ಸೂಚನೆ ನೀಡಲಾಗಿತ್ತು. ಇದರಿಂದ ನಾನು ನೊಂದಿದ್ದೇನೆ’ ಎಂದು ಸೆಹ್ರಾವತ್ ಆರೋಪಿಸಿದ್ದಾರೆ.
ಬವಾನಾ ವಾರ್ಡ್‌ನ ಎಎಪಿ ಕಾರ್ಪೊರೇಟರ್ ಪವನ್ ಅವರನ್ನು ಬಿಜೆಪಿಯ ದೆಹಲಿ ಘಟಕದ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಪ್ರಧಾನ ಕಾರ್ಯ ದರ್ಶಿ ಹರ್ಷ್ ಮಲ್ಹೋತ್ರಾ ಅವರು ಬಿಜೆಪಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೆಹಲಿ ಬಿಜೆಪಿಯ ಹಲವು ನಾಯಕರು ಉಪಸ್ಥಿತರಿದ್ದರು.
‘ಎಎಪಿ ಕಾರ್ಪೊರೇಟರ್‌ಗಳ ನಡುವೆ ಭಿನ್ನಾಭಿಪ್ರಾಯವಿದೆ’ ಎಂದು ಬಿಜೆಪಿ ನಾಯಕ ಮಲ್ಹೋತ್ರಾ ಹೇಳಿದರು. ಅಡ್ಡ ಮತದಾ ನದ ಮೇಲೆ ಕಣ್ಣಿಡಲೆಂದೇ, ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ವೇಳೆ ಮೊಬೈಲ್ ಕೊಂಡೊಯ್ಯುವಂತೆ ಸದಸ್ಯರಿಗೆ ಎಎಪಿ ಸೂಚನೆ ನೀಡಿದೆ ಎಂದು ಆರೋಪಿಸಿದರು.
ದೆಹಲಿ ಪಾಲಿಕೆ ಸ್ಥಾಯಿ ಸಮಿತಿಯ ಆರು ಸದಸ್ಯರ ಚುನಾವಣೆಗೆ ಇಂದು (ಶುಕ್ರವಾರ) ಸಮಯ ನಿಗದಿಯಾಗಿದೆ.