ಕೋಲ್ಕತ್ತ: ಶಾಲಾ ಉದ್ಯೋಗ ಹಗರಣ ಸಂಬಂಧ ನ.9ರಂದು ವಿಚಾರಣೆಗೆ ಹಾಜರಾಗಬೇಕು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ನೋಟಿಸ್ ಜಾರಿ ಮಾಡಿದೆ.
ಬ್ಯಾನರ್ಜಿ ಅವರು ಆ ದಿನ ಇ.ಡಿ ಮುಂದೆ ಹಾಜರಾಗಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮತ್ತು ಟಿಎಂಸಿ ವಕ್ತಾರರಾದ ಶಶಿ ಪಂಜಾ ಹೇಳಿದ್ದಾರೆ. ಇದೊಂದು ಸೇಡಿನ ರಾಜಕಾರಣ ಎಂದು ಅವರು ಕಿಡಿಕಾರಿದ್ದಾರೆ. ಮುಂದಿನ ವರ್ಷ ಚುನಾವಣೆ ನಡೆಯ ಲಿರುವುದರಿಂದ ನಮ್ಮ ನಾಯಕರಿಗೆ ಬಿಜೆಪಿ ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ಪ್ರಕರಣ ಸಂಬಂಧ ವಿವಾರಣೆಗೆ ಹಾಜರಾಗಬೇಕು ಎಂದು ಅಕ್ಟೋಬರ್ 13ರಂದು ಇ.ಡಿ ನೋಟಿಸ್ ನೀಡಿತ್ತು. ಅದಕ್ಕೆ ಗೈರು ಹಾಜರಾಗಿದ್ದರಿಂದ ಅ.9 ಎಂದು ವಿಚಾರಣೆಗೆ ಹಾಜರಾಗಲು ನೋಟಿಸ್ ರವಾನಿಸಿತ್ತು.
ಸೆ. 13ರಂದು ಸುಮಾರು 9 ಗಂಟೆಗಳ ಕಾಲ ಇ.ಡಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.