ನವದೆಹಲಿ: ತನ್ನ 14 ವರ್ಷದ ಮಗಳ 28 ವಾರಗಳ ಗರ್ಭಧಾರಣೆ ಕೊನೆಗೊಳಿಸುವಂತೆ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.
ವೈದ್ಯಕೀಯ ಮಂಡಳಿಯ ಹೊಸ ವೈದ್ಯಕೀಯ ವರದಿಯ ನಂತರ ನ್ಯಾಯಾಲಯವು ಅನುಮತಿ ನೀಡಿತು.
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಶುಕ್ರವಾರ ಈ ಪ್ರಕರಣವನ್ನು ಇಮೇಲ್ ಮೂಲಕ ತುರ್ತಾಗಿ ಉಲ್ಲೇಖಿಸಿದ ನಂತರ ವಿಚಾರಣೆ ನಡೆಸಿತು ಮತ್ತು ಗರ್ಭಿಣಿ ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಸೋಮವಾರದೊಳಗೆ ವರದಿಯನ್ನು ಸಲ್ಲಿಸುವಂತೆ ಮುಂಬೈ ಆಸ್ಪತ್ರೆಗೆ ನಿರ್ದೇಶನ ನೀಡಿತು.
ಮುಂದುವರಿದ ಹಂತದಲ್ಲಿ ಗರ್ಭಧಾರಣೆಯನ್ನು ಕೊನೆಗೊಳಿಸುವುದರಿಂದ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಭ್ರೂಣದ ಜನನಕ್ಕೆ ಕಾರಣ ವಾಗುತ್ತದೆ ಎಂದು ಹೇಳಿ ಗರ್ಭಧಾರಣೆಯನ್ನು ಕೊನೆಗೊಳಿಸಬೇಕೆಂಬ ಅತ್ಯಾಚಾರ ಸಂತ್ರಸ್ತೆಯ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು.
14 ವರ್ಷದ ಬಾಲಕಿಗೆ ಗರ್ಭಪಾತ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ ನಿರಾಕರಿಸಿದ ನಂತರ ಅತ್ಯಾಚಾರ ಸಂತ್ರಸ್ತೆಯ ತಾಯಿ ತುರ್ತು ವಿಚಾರಣೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.