Saturday, 14th December 2024

ಟ್ರಕ್ ಪಲ್ಟಿ: ಐವರಿಗೆ ಗಾಯ

ಮುಂಬೈ-ಬೆಂಗಳೂರು ಹೆದ್ದಾರಿಯ ಸೇತುವೆ
ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮುಂಬೈ-ಬೆಂಗಳೂರು ಹೆದ್ದಾರಿಯ ಸೇತುವೆಯ ಬಳಿ ಬುಧವಾರ ಟ್ರಕ್ ವೊಂದು ಪಲ್ಟಿ ಹೊಡೆದ ಪರಿಣಾಮ ಕನಿಷ್ಟ ಐವರು ಗಾಯಗೊಂಡಿ ದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನವಲೆ ಸೇತುವೆಯ ಸಮೀಪವಿರುವ ಭೂಮ್ಕರ್ ಚೌಕ್ ಬಳಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಟ್ರಕ್ ಸತಾರಾ ಕಡೆಯಿಂದ ಬರುತ್ತಿದ್ದಾಗ ಪಲ್ಟಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಲ್ಕರಿಂದ ಐದು ಜನರು ಗಾಯ ಗೊಂಡಿದ್ದಾರೆಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿನ್ಹಗಡ್ ರೋಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯಂತ್ ರಾಜೂರ್ಕರ್ ತಿಳಿಸಿದ್ದಾರೆ.