Wednesday, 11th December 2024

ಧಾರ್ಮಿಕ ಕ್ರಿಯೆಗೆ ತೆರಳಿದವರು ಮಸಣಕ್ಕೆ: 9 ಮಂದಿ ಸಾವು, 11 ಜನರಿಗೆ ಗಾಯ

ಜೇಪೋರ್: 10 ದಿನ ಬಳಿಕ ನಡೆಯುವ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಛತ್ತೀಸ್ ಗಢದಿಂದ ಹೊರಟಿದ್ದ ಜನರ ಬದುಕು ದಾರುಣ ಅಂತ್ಯವಾಗಿದೆ. ರಸ್ತೆಬದಿಯ ಮರಕ್ಕೆ ಪಿಕ್ ಅಪ್ ವ್ಯಾನ್ ಢಿಕ್ಕಿ ಹೊಡೆದು ಮಗುಚಿದ್ದು 9 ಮಂದಿ ಮೃತಪಟ್ಟು 11 ಮಂದಿಗೆ ಗಾಯಗೊಂಡಿದ್ದಾರೆ. ಒಡಿಶಾದ ಜೇಪೋರ್ ನ ಮುರ್ತಹಂಡಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ಗಾಯಗೊಂಡ 11 ಮಂದಿಯಲ್ಲಿ ನಾಲ್ವರು ಕೊಟ್ಪಾಡ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ. 7 ಮಂದಿ ಜಗ್ದಾಲ್ ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ನಂತರ ಚಾಲಕ ತಲೆಮರೆಸಿಕೊಂಡಿದ್ದಾನೆ. ರೈಲ್ವೆ ಹಳಿ ಹಿಂದೆ ರಸ್ತೆಯಲ್ಲಿ ಪಿಕ್ ಅಪ್ ವ್ಯಾನ್ ಮಗುಚಿ ಬಿದ್ದು ಈ ಅಪಘಾತ ಸಂಭವಿಸಿದೆ. ವಾಹನದೊಳಗೆ ಸುಮಾರು 30 ಮಂದಿ ಪ್ರಯಾಣಿಕರಿದ್ದರು ಎಂದು ಒಡಿಶಾ ಅಗ್ನಿಶಾಮಕ ಸೇವೆಯ ಅಧಿಕಾರಿ ತಿಳಿಸಿದ್ದಾರೆ.