Wednesday, 11th December 2024

ಆಗ್ರಾದಲ್ಲಿ ಟ್ರಕ್-ಕಾರಿನ ಮಧ್ಯೆ ಡಿಕ್ಕಿ: ಎಂಟು ಮಂದಿ ದಾರುಣ ಸಾವು

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಟ್ರಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಎಂಟು ಮಂದಿ ಮೃತಪಟ್ಟಿದ್ದಾರೆ.

ನಾಲ್ಕು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗಾಲ್ಯಾಂಡ್ ನಿಂದ ಬರುತ್ತಿದ್ದ ಟ್ರಕ್ ಮತ್ತು ಜಾರ್ಖಂಡ್ ಕಾರು ಮಧ್ಯೆ ಡಿಕ್ಕಿ ಸಂಭವಿಸಿದೆ.

ಟ್ರಕ್ ಮತ್ತು ಕಾರು ಮಧ್ಯೆ ಢಿಕ್ಕಿ ಸಂಭವಿಸಿ ಎಂಟು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಆಗ್ರಾದ ಎಟ್ಮೌದ್ದೌಲ ಪ್ರದೇಶ ದಲ್ಲಿ ಗುರುವಾರ ಸಂಭವಿಸಿದೆ. ಘಟನೆಯಲ್ಲಿ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಟ್ರಕ್ ನಾಗಾಲ್ಯಾಂಡ್ ನದ್ದಾಗಿದ್ದು, ಕಾರು ಜಾರ್ಖಂಡ್‌ ಮೂಲದ್ದಾಗಿದೆ.