Friday, 13th December 2024

ಕಾರು ಮರಕ್ಕೆ ಡಿಕ್ಕಿ: ಕಲಾವಿದೆಯರು ಸೇರಿ ಮೂವರ ಸಾವು

ಹೈದರಾಬಾದ್: ಅತೀ ವೇಗವಾಗಿ ಬಂದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಎರಡು ತಂಡಾಗಿದ್ದು ಕಿರಿಯ ಕಲಾವಿದೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಗಾಚಿಬೌಲಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಲಾವಿದೆಯರಾದ 21 ವರ್ಷದ ಮಾನಸ ಎಂ, 23 ವರ್ಷದ ಮಾನಸ ಎನ್ ಮತ್ತು ಬ್ಯಾಂಕ್ ಉದ್ಯೋಗಿ ಅಬ್ದುಲ್ ರಹೀಮ್ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಕಲಾವಿದ ಸಾಯಿ ಸಿಂಧು ಗಂಭೀರವಾಗಿ ಗಾಯಗೊಂಡಿ ದ್ದಾರೆ.

ಮೃತ ಕಲಾವಿದೆಯರಿಬ್ಬರು ಅಮರಪೇಟೆಯ ಹಾಸ್ಟೆಲ್ ನಲ್ಲಿ ವಾಸವಿದ್ದು ಇಬ್ಬರು ಟಿವಿ ಸೀರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಲಿಂಗಂಪಲ್ಲಿಗೆ ಪ್ರಯಾಣಿಸುತ್ತಿದ್ದು ಕಾರು ಅತಿವೇಗದಲ್ಲಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.