Saturday, 14th December 2024

ಸೇತುವೆ ಬಳಿ ರಸ್ತೆ ಅಪಘಾತ: ಮತಗಟ್ಟೆ ಕಾರ್ಯಕರ್ತ ಸಾವು

ವೋಖಾ : ನಾಗಾಲ್ಯಾಂಡ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಡೊಯಾಂಗ್‌ನ ತಿಲೋಂಗ್ ಸೇತುವೆ ಬಳಿ ಭಾರಿ ರಸ್ತೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಒಬ್ಬ ಮತಗಟ್ಟೆ ಕಾರ್ಯಕರ್ತ ಮೃತಪಟ್ಟರೆ, 13 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ವೋಖಾದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸಾನಿಸ್ ವಿಧಾನಸಭಾ ಕ್ಷೇತ್ರದ ಸುಂಗ್ರೋ ಸೆಕ್ಟರ್‌ನಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಮತಗಟ್ಟೆ ಅಧಿಕಾರಿ ಸುಂಗ್ರೋಗೆ ಬಸ್ಸಿನಲ್ಲಿ ಹೋಗುತ್ತಿದ್ದರು. ಏಕಾಏಕಿ ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಕಾಡಿಗೆ ಬಿದ್ದಿದೆ.

ಅಪಘಾತದ ನಂತರ, ವೋಖಾ ಪ್ರಧಾನ ಕಛೇರಿಯಿಂದ ಹೊಸ ಚುನಾವಣಾ ಸಿಬ್ಬಂದಿಯ ತಂಡ ಹಾಗೂ ಮೀಸಲು ಮತಗಟ್ಟೆ ಸಿಬ್ಬಂದಿಯ ಮತ ಯಂತ್ರ/ಯಂತ್ರೋಪಕರಣಗಳನ್ನು ಮತ್ತೆ ರವಾನಿಸಲಾಯಿತು.