Wednesday, 11th December 2024

ನಾಪತ್ತೆ ಪ್ರಕರಣ: ಮಿಸ್ಡ್​ ಕಾಲ್​ನಿಂದಾಗಿ ಸಿಕ್ಕಿಬಿದ್ದ ಆರೋಪಿ..!

ನವದೆಹಲಿ: ಬಾಲಕಿ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದಿದೆ. ಬಾಲಕಿ ಕೇವಲ ನಾಪತ್ತೆಯಾಗಿಲ್ಲ, ಕೊಲೆಯಾಗಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. 10 ದಿನದ ಬಳಿಕ ಒಂದು ಮಿಸ್ಡ್​ ಕಾಲ್​ನಿಂದಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಫೆಬ್ರವರಿ 9 ರಂದು ತನ್ನ ಮಗಳು ಶಾಲೆಗೆ ಹೋಗಿದ್ದಳು ಆದರೆ ಹಿಂತಿರುಗಲಿಲ್ಲ ಎಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ದೆಹಲಿ ಪೊಲೀಸರ ಪ್ರಕಾರ, ತನಿಖೆಯ ಸಮಯದಲ್ಲಿ, ಅವರಿಗೆ ಸಂಖ್ಯೆ ಸಿಕ್ಕಿತ್ತು, ನಂತರ ಪೊಲೀಸರು ಪಂಜಾಬ್ ಮತ್ತು ಮಧ್ಯಪ್ರದೇಶದ ಪ್ರದೇಶಗಳಲ್ಲಿ ದಾಳಿ ನಡೆಸಿ ಶಂಕಿತ ಆರೋಪಿ ರೋಹಿತ್ ಅಲಿಯಾಸ್ ವಿನೋದ್‌ನನ್ನು ಬಂಧಿಸಿದ್ದಾರೆ.

ಆರೋಪಿ ಬಹಳ ಚಾಣಾಕ್ಷತನ ತೋರಿ, ನಿರಂತರವಾಗಿ ಸ್ಥಳ ಬದಲಾಯಿಸುತ್ತಿದ್ದನು. ಇದರಿಂದಾಗಿ ಪೊಲೀಸರು ಆತನನ್ನು ತಲುಪಲು ಸುಮಾರು 10 ದಿನಗಳನ್ನು ತೆಗೆದು ಕೊಂಡರು.

ಸಂತ್ರಸ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಇದರ ನಂತರ, ಫೆಬ್ರವರಿ 9 ರಂದು, ಯಾವುದೋ ನೆಪದಲ್ಲಿ, ಅವನು ತನ್ನೊಂದಿಗೆ ಹುಡುಗಿ ಯನ್ನು ಘೇವ್ರಾದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ. ಬಾಲಕಿ ನಾಪತ್ತೆಯಾಗುವ ಮೊದಲು ಆಕೆಯ ತಾಯಿಯ ಮೊಬೈಲ್​ಗೆ ಒಂದು ಮಿಸ್ಡ್​ಕಾಲ್ ಬಂದಿತ್ತು, ಆ ಮಿಸ್ಡ್​ ಕಾಲ್ ಆಧರಿಸಿ ಅಪರಾಧಿಯನ್ನು ಪತ್ತೆಹಚ್ಚಲಾಗಿದೆ.

ಬಾಲಕಿ ಶಾಲೆಗೆ ಹೋಗಿದ್ದ ದಿನ ಬೆಳಗ್ಗೆ 11.50ರ ಸುಮಾರಿಗೆ ಆಕೆಯ ತಾಯಿಗೆ ಮಿಸ್ಡ್ ಕಾಲ್ ಬಂದಿದ್ದು, ಮತ್ತೆ ಕರೆ ಮಾಡಿದಾಗ ನಂಬರ್ ಸ್ವಿಚ್ ಆಫ್ ಆಗಿತ್ತು.

ಕೊಲೆಗೆ ಸಂಬಂಧಿಸಿದಂತೆ ರೋಹಿತ್ ಅಲಿಯಾಸ್ ವಿನೋದ್ ಎಂದು ಗುರುತಿಸಲಾದ 21 ವರ್ಷದ ವ್ಯಕ್ತಿಯನ್ನು ಬಂಧಿಸಲಾಯಿತು. ಮುಂಡ್ಕಾ ಗ್ರಾಮದಿಂದ ಕೊಳೆತ ಸ್ಥಿತಿಯಲ್ಲಿದ್ದ ಬಾಲಕಿಯ ಶವವನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ.