Tuesday, 5th November 2024

ನಟ ಮಿಥುನ್ ಭೇಟಿ ಮಾಡಿದ ಮೋಹನ್ ಭಾಗವತ್

ಮುಂಬೈ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿರಿಯ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಈ ಭೇಟಿ ಪ್ರಾಮುಖ್ಯತೆ ಪಡೆದಿದೆ.

ಮಿಥುನ್ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಅನುಯಾಯಿಗಳಿದ್ದಾರೆ. ನಟ ಮಿಥುನ್‌ ಅವರು 3 ವರ್ಷಗಳ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಭೇಟಿಯಾಗಿದ್ದರು.

ನನಗೆ ಮೋಹನ್ ಭಾಗವತ್ ಜತೆ ಆಧ್ಯಾತ್ಮಿಕ ಬಾಂಧವ್ಯವಿದೆ. ಲಖನೌನಲ್ಲಿ ಭೇಟಿಯಾಗಿದ್ದೆ. ಬಳಿಕ, ಮುಂಬೈಗೆ ಬಂದಾಗ ಮನೆಗೆ ಭೇಟಿ ನೀಡುವಂತೆ ಮನವಿ ಮಾಡಿದ್ದೆ’ ಎಂದು ನಟ ಮಿಥುನ್‌ ಹೇಳಿದ್ದಾರೆ.  ರಾಜ್ಯಸಭಾ ಸದಸ್ಯರೂ ಆಗಿದ್ದ ಮಿಥುನ್‌, ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜತೆ ನಿಕಟ ಬಾಂಧವ್ಯ ಹೊಂದಿದ್ದರು.