Sunday, 6th October 2024

ಅದಾನಿ-ಹಿಂಡೆನ್ ಬರ್ಗ್ ವಿವಾದ: ಸೆಬಿ ತನಿಖೆಗೆ ಆ.14ರವರೆಗೆ ಗಡುವು

ವದೆಹಲಿ: ಅದಾನಿ ಗ್ರೂಪ್ ವಿರುದ್ಧದ ಹಿಂಡೆನ್ಬರ್ಗ್ ವರದಿಯ ತನಿಖೆಯನ್ನು ಪೂರ್ಣ ಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ಸೆಬಿಗೆ ಮೂರು ತಿಂಗಳ ವಿಸ್ತರಣೆ ನೀಡಿದೆ.

ಗೌತಮ್ ಅದಾನಿ ನೇತೃತ್ವದ ಸಮೂಹವು ಷೇರು ಬೆಲೆ ತಿರುಚಿದೆ ಎಂಬ ಆರೋಪದ ಬಗ್ಗೆ ತನಿಖೆಯ ಪರಿಷ್ಕೃತ ಸ್ಥಿತಿ ವರದಿಯನ್ನು ಆಗಸ್ಟ್ 14 ರೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೆಬಿಗೆ ಸೂಚಿಸಿದೆ.

ತನಿಖೆ ಮುಕ್ತಾಯಗೊಳಿಸಲು ಆರು ತಿಂಗಳ ವಿಸ್ತರಣೆಯನ್ನು ಕೋರಿ ಸೆಬಿ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಮುಂದೂಡಿದೆ.

ತನಿಖೆಯನ್ನು ಪೂರ್ಣಗೊಳಿಸಲು ಅನಿರ್ದಿಷ್ಟ ವಿಸ್ತರಣೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ತನಿಖೆಯ ನವೀಕರಿಸಿದ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ನಿಯಂತ್ರಕರಿಗೆ ನಿರ್ದೇಶನ ನೀಡಿತು. ನ್ಯಾಯಮೂರ್ತಿ ಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ಡಿವಾಲಾ ಅವರನ್ನೂ ಒಳಗೊಂಡ ನ್ಯಾಯಪೀಠವು, ನ್ಯಾಯಮೂರ್ತಿ ಎ.ಎಂ.ಸಪ್ರೆ ಸಮಿತಿಯ ವರದಿಯನ್ನು ಪಕ್ಷಕಾರರಿಗೆ ಲಭ್ಯವಾಗುವಂತೆ ಆದೇಶಿಸಿತು.