Sunday, 1st December 2024

AI: ಎಐ ರೂಪಾಂತರದಿಂದ 2028ರ ವೇಳೆಗೆ 2.73 ಮಿಲಿಯನ್ ಹೊಸ ಟೆಕ್ ಉದ್ಯೋಗಿಗಳನ್ನು ಸೇರಿ ಭಾರತದಲ್ಲಿನ ಹೊಸ ಉದ್ಯೋಗಿಗಳ ಸಂಖ್ಯೆ 33.9 ಮಿಲಿಯನ್ ಜಾಸ್ತಿ

ಸರ್ವಿಸ್‌ನೌ ಎಐ ಸ್ಕಿಲ್ಸ್ ಆಂಡ್ ಜಾಬ್ಸ್ ರಿಪೋರ್ಟ್ ಘೋಷಣೆ

ಹೊಸ ತಂತ್ರಜ್ಞಾನಗಳಿಂದ ಭಾರತದ ಪ್ರಮುಖ ಕ್ಷೇತ್ರಗಳ ಉದ್ಯೋಗಗಳಲ್ಲಿ ಭಾರಿ ಬದಲಾವಣೆ ಉಂಟಾಗಲಿದೆ, 2028ರ ವೇಳೆಗೆ 2.73 ಮಿಲಿಯನ್ ಹೊಸ ಟೆಕ್ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಉದ್ಯಮ ಪರಿವರ್ತನೆಗಾಗಿಯೇ ಇರುವ ಎಐ ವೇದಿಕೆಯಾದ ಸರ್ವಿಸ್‌ನೌ ಸಂಸ್ಥೆಯ ಹೊಸ ಸಂಶೋಧನಾ ವರದಿ ತಿಳಿಸಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತವು 2023ರಲ್ಲಿ 423.73 ಮಿಲಿಯನ್‌ ಉದ್ಯೋಗಿಗಳನ್ನು ಹೊಂದಿತ್ತು, ಆ ಉದ್ಯೋಗಿಗಳ ಸಂಖ್ಯೆಯು 2028ರ ವೇಳೆಗೆ 457.62 ಮಿಲಿಯನ್‌ಗೆ ಏರಬಹುದು ಎಂದು ಸರ್ವಿಸ್‌ನೌ ಹೊಸ ಸಂಶೋಧನಾ ವರದಿ ಘೋಷಿಸಿದೆ. ಈ ಮೂಲಕ 2028ರವೇಳೆ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 33.89 ಮಿಲಿಯನ್ ನಷ್ಟು ಹೆಚ್ಚಳವಾಗಲಿದೆ.

ಪ್ರಪಂಚದ ಪ್ರಮುಖ ಕಲಿಕಾ ಕಂಪನಿಯಾದ ಪಿಯರ್‌ಸನ್‌ ಈ ಸಂಶೋಧನೆಯನ್ನು ನಡೆಸಿದ್ದು, ಈ ಕಂಪನಿ ರಿಟೇಲ್ ಕ್ಷೇತ್ರವು ತನ್ನ ಉದ್ಯಮ ವಿಸ್ತರಣೆಯ ಉದ್ದೇಶದಿಂದ ಹೆಚ್ಚುವರಿ 6.96 ಮಿಲಿಯನ್ ಉದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಿ ಉದ್ಯೋಗಾವಕಾಶ ಹೆಚ್ಚಳದಲ್ಲಿ ಬಹಳ ದೊಡ್ಡ ಕೊಡುಗೆ ನೀಡಿರುವುದಾಗಿ ತಿಳಿಸಿದೆ. ಈ ಮೂಲಕ ಉದ್ಯೋಗಾವಕಾಶ ಹೆಚ್ಚಳದಲ್ಲಿ ರಿಟೇಲ್ ಕ್ಷೇತ್ರ ಮುಂಚೂಣಿಯಲ್ಲಿದೆ. ಈ ಉದ್ಯೋಗ ಹೆಚ್ಚಳದಿಂದ ರಿಟೇಲ್ ಕ್ಷೇತ್ರದ ವೃತ್ತಿಪರರು ಸಾಫ್ಟ್‌ ವೇರ್ ಅಪ್ಲಿಕೇಶನ್ ಡೆವಲಪ್‌ಮೆಂಟ್ ಮತ್ತು ಡೇಟಾ ಇಂಜಿನಿಯರಿಂಗ್‌ ನಂತಹ ಕ್ಷೇತ್ರಗಳಲ್ಲಿ ಕೌಶಲ್ಯವನ್ನು ಹೆಚ್ಚಿಸಲು ಅತ್ಯುತ್ತಮ ಅವಕಾಶ ಒದಗಿ ಬಂದಿದೆ. ಈ ಬೆಳವಣಿಗೆಯು ಈ ಉದ್ಯೋಗಿ ಸಮೂಹವನ್ನು ಟೆಕ್ ಆಧರಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಸನ್ನದ್ಧರಾಗುವಂತೆ ಮಾಡುತ್ತಿದೆ. ಈ ಕ್ಷೇತ್ರದ ಬಳಿಕ ಉತ್ಪಾದನಾ ಕ್ಷೇತ್ರ (1.50 ಮಿಲಿಯನ್ ಉದ್ಯೋಗಗಳು), ಶಿಕ್ಷಣ ಕ್ಷೇತ್ರ (0.84 ಮಿಲಿಯನ್ ಉದ್ಯೋಗಗಳು), ಮತ್ತು ಆರೋಗ್ಯ ಸೇವಾ ಕ್ಷೇತ್ರ (0.80 ಮಿಲಿಯನ್ ಉದ್ಯೋಗಗಳು) ಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ತಂತ್ರಜ್ಞಾನ ಬದಲಾವಣೆ ಮತ್ತು ಭಾರಿ ಆರ್ಥಿಕ ಬೆಳವಣಿಗೆ ನಿರೀಕ್ಷಿಸಲಾಗಿದೆ.

ಈ ಕುರಿತು ಮಾತನಾಡಿರುವ ಸರ್ವಿಸ್‌ನೌ ಇಂಡಿಯಾ ಟೆಕ್ನಾಲಜಿ ಮತ್ತು ಬಿಸಿನೆಸ್ ಸೆಂಟರ್‌ ನ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಮೀತ್ ಮಾಥುರ್ ಅವರು, “ಭಾರತದ ಬೆಳವಣಿಗೆಯನ್ನು ಮುನ್ನಡೆಸುವ ಕ್ಷೇತ್ರಗಳಲ್ಲಿ, ಅದರಲ್ಲೂ ವಿಶೇಷವಾಗಿ ಅತ್ಯಾಧುನಿಕ ತಾಂತ್ರಿಕ ಕೌಶಲ್ಯ ಅಗತ್ಯವಿರುವ ಉದ್ಯೋಗ ವಿಭಾಗದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚುಸುವಲ್ಲಿ ಎಐ ಬಹಳ ಪ್ರಮುಖವಾಗಿದೆ. ಇದರಿಂದ ವೃತ್ತಿಪರರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳು ಲಭ್ಯವಾಗುವುದು ಮಾತ್ರವೇ ಅಲ್ಲ, ಜೊತೆಗೆ ಅವರು ಡಿಜಿಟಲ್ ವೃತ್ತಿ ಜೀವನವನ್ನು ನಡೆಸಲು ಅವರಿಗೆ ನೆರವಾಗುತ್ತದೆ. ‘ರೈಸ್‌ಅಪ್‌ವಿತ್ ಸರ್ವೀಸ್‌ನೌ’ ನಂತಹ ಯೋಜನೆ ಮತ್ತು ಸ್ಥಳೀಯ ವಿಶ್ವವಿದ್ಯಾಲಯ ಹಾಗೂ ಸರ್ಕಾರಿ ಯೋಜನೆಗಳ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ನಾವು ಕೌಶಲ್ಯಾಭಿವೃದ್ಧಿ ಅವಕಾಶ ಒದಗಿಸಿ ಮತ್ತು ಅವಶ್ಯ ಸಾಧನಗಳನ್ನು ಒದಗಿಸಿ ಉದ್ಯೋಗಿಗಳ ಸಮೂಹವನ್ನು ಯಶಸ್ಸು ಸಾಧಿಸುವಂತೆ ಮಾಡುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ. ಪ್ರತಿಭಾವಂತರ ಸಮೂಹಕ್ಕೆ ಅಗತ್ಯ ಕೌಶಲ್ಯಗಳನ್ನು ಒದಗಿಸಿ ಸಜ್ಜುಗೊಳಿಸುವ ಮೂಲಕ ಜಾಗತಿಕ ತಂತ್ರಜ್ಞಾನ ಆರ್ಥಿಕತೆಯಲ್ಲಿ ಭಾರತವು ಮುಂಚೂಣಿಯಲ್ಲಿ ಇರುವಂತೆ ನೋಡಿಕೊಳ್ಳುವ ಉದ್ದೇಶ ಹೊಂದಿದ್ದೇವೆ” ಎಂದು ಹೇಳಿದರು.

ಉದ್ಯಮಗಳ ಬದಲಾವಣೆಯಿಂದ ಟೆಕ್ ಉದ್ಯೋಗಗಳಿಗೆ ಬೇಡಿಕೆ ಹೆಚ್ಚಳ
ವೃತ್ತಿಪರ, ವೈಜ್ಞಾನಿಕ ಮತ್ತು ತಾಂತ್ರಿಕ ಸೇವೆಗಳು, ಉತ್ಪಾದನೆ ಮತ್ತು ದೂರಸಂಪರ್ಕ ಕ್ಷೇತ್ರಗಳಂತಹ ಹಲವು ಕ್ಷೇತ್ರಗಳು ವಿಸ್ತರಣೆಗೆ ಮುಂದಾಗುತ್ತಿದ್ದು, ಅಲ್ಲಿ ಟೆಕ್ ಸಂಬಂಧಿತ ಉದ್ಯೋಗಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ. ಸಾಫ್ಟ್‌ ವೇರ್ ಅಪ್ಲಿಕೇಶನ್ ಡೆವಲಪರ್‌ ಗಳು ಈ ಟ್ರೆಂಡ್ ನಲ್ಲಿ ಮುಂಚೂಣಿಯಲ್ಲಿ ನಿಂತಿದ್ದು, ಈ ವಿಭಾಗದಲ್ಲಿ 109,700 ಹುದ್ದೆಗಳು ಹೆಚ್ಚಾಗುವ ನಿರೀಕ್ಷೆ ಇದೆ. ಸಿಸ್ಟಮ್ಸ್ ಸಾಫ್ಟ್‌ ವೇರ್ ಡೆವಲಪರ್‌ಗಳು (48,800 ಹೊಸ ಉದ್ಯೋಗಗಳು) ಮತ್ತು ಡೇಟಾ ಎಂಜಿನಿಯರ್‌ಗಳು (48,500 ಹೊಸ ಉದ್ಯೋಗಗಳು) ಆ ನಂತರದ ಸ್ಥಾನ ಪಡೆದಿದ್ದಾರೆ. ವೆಬ್ ಡೆವಲಪರ್‌ಗಳು, ಡೇಟಾ ವಿಶ್ಲೇಷಕರು ಮತ್ತು ಸಾಫ್ಟ್‌ ವೇರ್ ಪರೀಕ್ಷಕರಿಗೂ ಬೇಡಿಕೆ ಹೆಚ್ಚುತ್ತಿದೆ. ಕ್ರಮವಾಗಿ ವಿಭಾಗಗಳಲ್ಲಿ 48,500, 47,800 ಮತ್ತು 45,300 ಹುದ್ದೆಗಳು ಜಾಸ್ತಿ ಆಗುವ ನಿರೀಕ್ಷೆ ದೆ. ಹೆಚ್ಚುವರಿಯಾಗಿ, ಡೇಟಾ ಇಂಟಿಗ್ರೇಷನ್ ಸ್ಪೆಷಲಿಸ್ಟ್‌ ಗಳು, ಡೇಟಾಬೇಸ್ ಆರ್ಕಿಟೆಕ್ಟ್‌ ಗಳು, ಡೇಟಾ ಸೈಂಟಿಸ್ಟ್‌ ಗಳು ಮತ್ತು ಕಂಪ್ಯೂಟರ್ ಆಂಡ್ ಇನ್ಫರ್ಮೇಷನ್ ಸಿಸ್ಟಮ್ಸ್ ಮ್ಯಾನೇಜರ್‌ ಗಳಂತಹ ಹುದ್ದೆಗಳು 42,700 ರಿಂದ 43,300 ಸ್ಥಾನಗಳವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ. ಹೊಸ ತಂತ್ರಜ್ಞಾನಗಳ ಪ್ರಭಾವ ಇಂಧನ, ಸರ್ಕಾರಿ ಸೇವೆಗಳು ಮತ್ತು ಇನ್ನಿತರ ಉಪಯುಕ್ತ ಕ್ಷೇತ್ರಗಳ ಮೇಲೆಯೂ ಉಂಟಾಗಿದ್ದು, ತಾಂತ್ರಿ ಬದಲಾವಣೆಗಳಿಂದ ಉದ್ಯೋಗಾವಕಾಶ ಹೆಚ್ಚಲ ಉಂಟಾಗುತ್ತಿದೆ.

ಐಟಿಯಲ್ಲಿ ಟೆಕ್ ಹುದ್ದೆಗಳನ್ನು ಮರುರೂಪಿಸುತ್ತಿರುವ ಜೆನ್ ಐ
ಹೊಸ ತಂತ್ರಜ್ಞಾನಗಳು ಟಾಸ್ಕ್ ಹಂತದ ಅಥವಾ ಕಾರ್ಯ ನಿರ್ವಹಣಾ ಹಂತದ ಉದ್ಯೋಗಗಳ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಮಾಲ್ಯಮಾಪನ ಮಾಡಲಾಗಿದೆ. ಅವುಗಳಲ್ಲಿ ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್‌ಗಳು ಭಾರಿ ಬದಲಾವಣೆ ಎದುರಿಸುವ ಸಾಧ್ಯತೆ ಇಧೆ. ಯಾಕೆಂದರೆ ಅವರ ವಾರದ 6.9 ಗಂಟೆಗಳ ಕಾರ್ಯಗಳನ್ನು ಹೊಸ ತಂತ್ರಜ್ಞಾನಗಳು ಸ್ವಯಂಚಾಲಿತವಾಗಿ ಅಥವಾ ವೇಗವಾಗಿ ಮಾಡುವುದರಿಂದ ಈ ಹುದ್ದೆಗಳಲ್ಲಿ ಭಾರಿ ಬದಲಾವಣೆ ಉಂಟಾಗಲಿದೆ. ಎಐ ಸಿಸ್ಟಮ್ಸ್ ಇಂಜಿನಿಯರ್‌ಗಳು ಜೆನ್ ಎಐ ನಿಂದ ಭಾರಿ ಪ್ರಯೋಜನ ಪಡೆಯುತ್ತಾರೆ. ಈ ಹುದ್ದೆಯ ಮೇಲೆ ಬೇರೆ ಎಲ್ಲಾ ಹುದ್ದೆಗಳ ಮೇಲೆ ಉಂಟಾಗುವ ಅರ್ಧದಷ್ಟು ಪರಿಣಾಮ ಉಂಟಾಗುತ್ತದೆ. ಯಾಕೆಂದರೆ ಎಐ ತಂತ್ರಜ್ಞಾನಕ್ಕೂ ಈ ಹುದ್ದೆಗೂ ಬಹಳ ಹತ್ತಿರದ ಸಂಬಂಧ ಇದೆ. ಅದೇ ಥರ, ಇಂಪ್ಲಿಮೆಂಟೇಷನ್ ಕನ್ಸಲ್ಟೆಂಟ್ ಹುದ್ದೆಯಲ್ಲಿರುವವರು ಕೂಡ ಜನರೇಟಿವ್ ಎಐನ ಸಂಯೋಜನೆಯಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆಯಲಿದ್ದಾರೆ. ಯಾಕೆಂದರೆ ಎಐ ಪುನರಾವರ್ತಿತ ಕೆಲಸಗಳನ್ನು ಕಡಿಮೆ ಮಾಡುವುದರಿಂದ ವಾರಕ್ಕೆ 1.9 ಗಂಟೆಗಳನ್ನು ಉಳಿಸುತ್ತಿದ್ದು, ಆ ಮೂಲಕ ಹೆಚ್ಚು ಕಾರ್ಯತಂತ್ರದ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಎಲ್ಲಕ್ಕಿಂತ ಕಡಿಮೆ ಪರಿಣಾಮ ಎದುರಿಸಬಹುದಾದ ಪ್ಲಾಟ್‌ಫಾರ್ಮ್ ಮಾಲೀಕರು ಸಹ ಎಐನಿಂದ ಪ್ರತಿ ವಾರ ಸುಮಾರು ಅರ್ಧ ಗಂಟೆಯನ್ನು ಉಳಿಸಬಹುದಾಗಿದೆ. ಹೊಸ ಕಾಲದ ತಂತ್ರಜ್ಞಾನಗಳು ಟೆಕ್ ಪರಿಸರ ವ್ಯವಸ್ಥೆಯಲ್ಲಿನ ಹುದ್ದೆಗಳನ್ನು ಕ್ರಾಂತಿಕಾರಕವಾಗಿ ಬಗಲಿಸುತ್ತದೆ ಮತ್ತು ವೃತ್ತಿಪರರು ಚುರುಕಾಗಿ ಹಾಗೂ ವೇಗವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ಈ ಕುರಿತು ಮಾತು ಮುಂದುವರಿಸುವ ಸುಮೀತ್ ಮಾಥೂರ್ ಅವರು, “ಸರ್ವಿಸ್‌ನೌ ಜನರಲ್ ಎಐ ಅನ್ನು ಅನುಷ್ಠಾನ ಮಾಡಿದ ಮೊದಲ 120 ದಿನಗಳಲ್ಲಿ ನಾವು $5M+ ವಾರ್ಷಿಕ ವೆಚ್ಚ ಕಡಿಮೆ ಆಗುವಂತೆ ನೋಡಿಕೊಂಡಿದ್ದೇವೆ ಮತ್ತು ವಿಶೇಷವಾಗಿ ಸರ್ವಿಸ್‌ನೌನಲ್ಲಿ $4M+ ಉತ್ಪಾದನಾ ಲಾಭ ಸಾಧಿಸಿದ್ದೇವೆ. ಇಂದು ಸರ್ವಿಸ್‌ನೌನ ಒಟ್ಟು ಎಐ ಮೌಲ್ಯದ ಶೇ.30 ನೌ ಅಸಿಸ್ಟ್‌ ಮೂಲಕ ಬರುತ್ತದೆ. ನಾವು ವಾರದ ಉತ್ಪಾದಕತೆಯ ಸಮಯದಲ್ಲಿ ಶೇ.10ರಷ್ಟು ಅಭಿವೃದ್ಧಿ ಆಗಿರುವುದನ್ನು ಗಮನಿಸಿದ್ದೇವೆ ಮತ್ತು ಆಶ್ಚರ್ಯಕರವಾಗಿ ಶೇ.48ರಷ್ಟು ಕೋಡ್ ಅಕ್ಸೆಪ್ಟೆನ್ಸ್ ರೇಟ್ ಸಾಧ್ಯವಾಗಿರುವುದು ನೋಡಿದ್ದೇವೆ. ಉದ್ಯೋಗಿ ಸೇವೆಗಳಲ್ಲಿ ಬಹಳ ದೊಡ್ಡ ಪರಿಣಾಮ ಉಂಟಾಗಿರುವುದನ್ನು ನಾವು ನೋಡಿದ್ದೇವೆ. ಸರ್ಚ್ ಮೂಲಕವೇ ನಾವು 62000 ಗಂಟೆಗಳನ್ನು ಉಳಿಸಿದ್ದೇವೆ ಮತ್ತು ಉದ್ಯೋಗಿ ಡಿಫ್ಲೆಕ್ಷನ್ ರೇಟ್ ಅನ್ನು ಶೇ.14 ಹೆಚ್ಚು ಮಾಡಿದ್ದೇವೆ. ಸರ್ವಿಸ್‌ನೌ ಸಂಸ್ಥೆಯಲ್ಲಿ ನಮಗೆ ಹೆಚ್ಚು ಉತ್ಪಾದಕತೆ ಹೊಂದಲು ಎಐ ಭಾರಿ ಸಹಾಯ ಮಾಡುತ್ತಿದೆ ಮತ್ತು ನಮ್ಮ ಗ್ರಾಹಕರು ತಮ್ಮ ಉತ್ಪಾದಕತೆಯ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತಿದೆ” ಎಂದು ಹೇಳಿದರು.

ಭಾರತದಲ್ಲಿ ಉದ್ಯೋಗ-ಸಿದ್ಧ ಪ್ರತಿಭಾ ಸಮೂಹ ನಿರ್ಮಾಣ
ಈ ಸಂದರ್ಭವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಕಂಪನಿಗಳು ಮತ್ತು ನೀತಿ ನಿರೂಪಕರು ಯುವ ಪ್ರತಿಭೆಗಳಿಗೆ ಅವಶ್ಯ ಇರುವ ಸೂಕ್ತ ಕೌಶಲ್ಯವನ್ನು ಒದಗಿಸುವ ಮೂಲಕ ಟೆಕ್ ಸಶಕ್ತ ಉದ್ಯೋಗ ಸಮೂಹ ಹೊಂದುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ‘ರೈಸ್‌ಅಪ್ ವಿತ್ ಸರ್ವಿಸ್‌ನೌ’ ಯೊಜನೆಯು ಯುವ ಎಂಜಿನಿಯರ್‌ಗಳಿಗೆ ಪ್ರಾಯೋಗಿಕ, ಉದ್ಯೋಗ-ಸಿದ್ಧ ಕೌಶಲ್ಯಗಳನ್ನು ಒದಗಿಸುವುದಕ್ಕೆ ಗಮನ ಕೇಂದ್ರೀಕರಿಸಿರುವ ಜಾಗತಿಕ ಯೋಜನೆಯಾಗಿದ್ದು, 2024ರ ವೇಳೆಗೆ ವಿಶ್ವದಾದ್ಯಂತ ಒಂದು ಮಿಲಿಯನ್ ವ್ಯಕ್ತಿಗಳಿಗೆ ಡಿಜಿಟಲ್ ಕೌಶಲಗಳ ತರಬೇತಿ ನೀಡುವ ಉದ್ದೇಶ ಹೊಂದಿದ್ದು, ಆ ಮೂಲಕ ಉದ್ಯೋಗ ಸಿದ್ಧ ಪ್ರತಿಭಾ ಸಮೂಹ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ಕಳೆದ 12 ತಿಂಗಳುಗಳಲ್ಲಿ 97,695 ಭಾರತೀಯರು ಕಂಪನಿಯ ಎಐ ವೇದಿಕೆಯ ಮೂಲಕ ಕೌಶಲ್ಯ ಅಭಿವೃದ್ಧಿ ಮಾಡಿದ್ದಾರೆ. ಸರ್ವಿಸ್‌ನೌ ಸಂಸ್ಥೆಯು ನಾಸ್ ಕಾಮ್ ನ ಫ್ಯೂಚರ್ ಸ್ಕಿಲ್ಸ್ ಪ್ರೈಮ್ ಮತ್ತು ಎಐಸಿಟಿಇಯಂತಹ ಸರ್ಕಾರಿ ಸಂಸ್ಥೆಗಳೊಂದಿಗಿನ ಸಹಭಾಗಿತ್ವ ಹಾಗೂ 16 ರಾಜ್ಯಗಳಾದ್ಯಂತ ಇರುವ 20 ವಿಶ್ವವಿದ್ಯಾನಿಲಯಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಇದೀಗ ತನ್ನ ಯುನಿವರ್ಸಿಟಿ ಅಕಾಡೆಮಿಕ್ ಪ್ರೋಗಾಮ್ ಆರಂಭ ಮಾಡಿದೆ. ಈ ಪ್ರಯತ್ನಗಳ ಮೂಲಕ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಟೆಕ್ ಉದ್ಯಮಕ್ಕೆ ಉದ್ಯೋಗ-ಸಿದ್ಧ ಪ್ರತಿಭೆಗಳ ಸಮೂಹವನ್ನು ರಚಿಸಿದೆ.

ಸಂಶೋಧನಾ ವಿಧಾನ (ಮೆಥಡಾಲಜಿ):
ಪಿಯರ್ಸನ್ಸ್ ಲೇಬರ್ ಮಾರ್ಕೆಟ್ ಇನ್ ಸೈಟ್ಸ್ (ಎಲ್ಎಂಐ) ಮಾಡೆಲಿಂಗ್‌ ಹೊಸ ಕಾಲದ ತಂತ್ರಜ್ಞಾನಗಳು ಮತ್ತು ನಿರೀಕ್ಷಿತ ಆರ್ಥಿಕ ಸ್ಥಿತಿ ಬದಲಾವಣೆ, ಸ್ವಲ್ಪ ಮಟ್ಟಿಗಿನ ತಂತ್ರಜ್ಞಾನ ಅಳವಡಿಕೆ ಹಾಗೂ ಜನಸಂಖ್ಯಾ ಹೆಚ್ಚಳದಂತಹ ಅಂಶಗಳಿಂದ ಉಂಟಾಗುವ ಪರಿಣಾಮವನ್ನು ಪರಿಗಣಿಸಿ ಮುಂದಿನ ಮುಂದಿನ 1 ರಿಂದ 15 ವರ್ಷಗಳಲ್ಲಿ ಉದ್ಯೋಗಗಳು ಮತ್ತು ಕೈಗಾರಿಕೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಊಹಿಸಿದೆ. ಭಾರತದಲ್ಲಿ ದೇಶದ ಕಾರ್ಮಿಕ ವಿಭಾಗದ ಮಾಹಿತಿಯನ್ನು ಜನಗಣತಿ ಮತ್ತು ಕಾರ್ಮಿಕ ಬಲ ಸಮೀಕ್ಷೆಯ ಫಲಿತಾಂಶಗಳಿಂದ ಪಡೆಯಲಾಗಿದ್ದು, ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್)ನಿಂದ ಅಭಿವೃದ್ಧಿ ಸಾಧ್ಯತೆ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ.

ಉದ್ಯೋಗಗಳಲ್ಲಿನ ಕೆಲಸಗಳಿಗೆ ಪ್ರಸ್ತುತ ವ್ಯಯಿಸುತ್ತಿರುವ ಸಮಯವನ್ನು ವಿಶ್ಲೇಷಿಸುವ ಮೂಲಕ ಹೊಸ ಕಾಲದ ತಂತ್ರಜ್ಞಾನಗಳು ಈ ಕೆಲಸಗಳಿಗೆ ಹೇಗೆ ಸಹಾಯ ಮಾಡಬಹುದು ಅಥವಾ ಪೂರ್ಣಗೊಳಿಸಬಹುದು ಹಾಗೂ ಮಾನವರು ಆ ಮೂಲಕ ಹೆಚ್ಚಿನ ಮೌಲ್ಯ ಒದಗಿಸುವ ಕೆಲಸಗಳ ಮೇಲೆ ಗಮನ ಹರಿಸಬಹುದು ಎಂಬುದನ್ನು ಈ ಮಾಡೆಲ್ ಪತ್ತೆ ಹಚ್ಚುತ್ತದೆ. ಪಿಯರ್ಸನ್‌ನ ಆಂಟಾಲಜಿಯಲ್ಲಿನ 80,000 ಕೆಲಸಗಳ ಮೇಲೆ ಹೊಸ ಕಾಲದ ತಂತ್ರಜ್ಞಾನಗಳು ಹೇಗೆ ಪ್ರಭಾವ ಬೀರುತ್ತವೆ ಎಂಬ ಪರೀಕ್ಷೆ ನಡೆಸಲಾಗಿತ್ತು. ಉದ್ಯೋಗ, ಉದ್ಯಮ ಮತ್ತು ದೇಶದ ಮೇಲೆ ಈ ಪರಿಣಾಮಗಳು ಹೇಗೆ ವಿಭಿನ್ನವಾಗಿರುತ್ತವೆ ಎಂಬುದನ್ನು ಕೂಡ ಪರೀಕ್ಷಿಸಲಾಗಿತ್ತು. ಈ ಅಂಶಗಳನ್ನು ಪರಿಗಣಿಸಿದ ಬಳಿಕ ಈ ಮಾಡೆಲ್ ಕೆಲಸ, ಉದ್ಯೋಗ ಮತ್ತು ಉದ್ಯಮದ ಹಂತಗಳ ಮೇಲೆ ಉಂಟಾಗುವ ಬದಲಾವಣೆಯ ಕುರಿತ ಒಳನೋಟಗಳನ್ನು ಒದಗಿಸಿದ್ದು, ಆರ್ಥಿಕತೆಯ ಕುರಿತಾದ ಸಮಗ್ರ ನೋಟವನ್ನು ನೀಡಿದೆ.