Saturday, 14th December 2024

ಎಐಎಡಿಎಂಕೆಯಿಂದ 16 ಸದಸ್ಯರ ಉಚ್ಛಾಟನೆ

 ಚೆನ್ನೈ: ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ಅವರೊಂದಿಗೆ ಒಪ್ಪಂದ ಮಾಡಿಕೊಂಡ ಆರೋಪದ ಮೇಲೆ ಎಐಎಡಿಎಂಕೆ, ಸೋಮವಾರ ತನ್ನ ವಕ್ತಾರ ವಿ ಪುಗಝೆಂಡಿ ಸೇರಿದಂತೆ 16 ಪಕ್ಷದ ಸದಸ್ಯರನ್ನು ಉಚ್ಚಾಟಿಸಿದೆ.

ಪಕ್ಷ ವಿರೋಧಿ ಚಟುವಟಿಕೆಗಳಿಗೆ ಆರೋಪಿಸಿ ಶಶಿಕಲಾ ಅವರೊಂದಿಗೆ ಸಂವಹನ ನಡೆಸಿದ ಸದಸ್ಯರನ್ನು ವಜಾ ಮಾಡಿತು. ಶಶಿಕಲಾ ಮತ್ತು ಪಕ್ಷದ ಒಬ್ಬ ಸದಸ್ಯರ ನಡುವಿನ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಬೆಳವಣಿಗೆ ನಡೆದಿದೆ.

ಏತನ್ಮಧ್ಯೆ, ಎಐಎಡಿಎಂಕೆ ಸಂಯೋಜಕ ಒ ಪನ್ನೀರ್ಸೆಲ್ವಂ ಅವರನ್ನು ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಉಪನಾಯಕ ನಾಗಿ ಆಯ್ಕೆ ಮಾಡಲಾಗಿದ್ದು, ಮಾಜಿ ಸಚಿವ ಎಸ್ಪಿ ವೇಲುಮಣಿ ಅವರು ಪಕ್ಷದ ವಿಪ್ ಆಗಿರುತ್ತಾರೆ.