Wednesday, 6th November 2024

ಎಐಸಿಸಿ ಖಜಾಂಚಿಯಾಗಿ ಪವನ್‌ ಕುಮಾರ್‌ ಬನ್ಸಾಲ್‌

ನವದೆಹಲಿ: ಪಕ್ಷದ ಖಜಾಂಚಿಯಾಗಿ ಕೇಂದ್ರದ ಮಾಜಿ ಸಚಿವ ಪವನ್‌ ಕುಮಾರ್‌ ಬನ್ಸಾಲ್‌ ಅವರನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ನೇಮಕ ಮಾಡಿದ್ದಾರೆ.

ಅಹ್ಮದ್‌ ಪಟೇಲ್‌ ಅವರ ನಿಧನದಿಂದಾಗಿ ಸ್ಥಾನ ತೆರವಾಗಿತ್ತು. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ(ಎಐಸಿಸಿ) ಆಡಳಿತದ ಹೊಣೆ ಹೊತ್ತಿರುವ ಬನ್ಸಾಲ್, ಮಧ್ಯಂತರ ಕ್ರಮವಾಗಿ ತಕ್ಷಣದಿಂದ ಜಾರಿಯಾಗುವಂತೆ ಹೆಚ್ಚುವರಿಯಾಗಿ ಈ ಹುದ್ದೆಯನ್ನು ವಹಿಸ ಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.