Saturday, 14th December 2024

ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ 10 ಲಕ್ಷ ಉದ್ಯೋಗ ಸೃಷ್ಟಿ

ನವದೆಹಲಿ: ಭಾರತದೊಂದಿಗಿನ ಒಪ್ಪಂದದಿಂದ ಅಮೇರಿಕಾದಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಅಮೇರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಏರ್ ಇಂಡಿಯಾ-ಬೋಯಿಂಗ್ ಒಪ್ಪಂದದಿಂದ 44 ರಾಜ್ಯಗಳಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗ ಲಿದ್ದು, ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸಿಕೊಳ್ಳುವುದಕ್ಕೆ ಎದುರು ನೋಡು ತ್ತಿರುವುದಾಗಿ ಪ್ರಧಾನಿ ಮೋದಿಗೆ ಜೋ ಬೈಡನ್ ಹೇಳಿದ್ದಾರೆ. ಬೋಯಿಂಗ್ ಹಾಗೂ ಏರ್ ಇಂಡಿಯಾ ಒಪ್ಪಂದ ಕ್ಕೆ ಮುಂದಾಗಿದ್ದು ಈ ಒಪ್ಪಂದದ ಪ್ರಕಾರ ವಿಮಾನಸಂಸ್ಥೆ 190 B737 MAX, 20 B787, ಮತ್ತು 10 B777X USD 34 ಶತಕೋಟಿ ಮೌಲ್ಯದ ಒಟ್ಟು 220 ಫರ್ಮ್ ಆರ್ಡರ್ ನಲ್ಲಿ ಖರೀದಿಸಲಿದೆ.
ಈ ಐತಿಹಾಸಿಕ ಒಪ್ಪಂದಕ್ಕೆ ಸಂಬಂಧಿಸಿದಂತೆ ಜೋ ಬೈಡನ್ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ ದ್ದರು. ಈ ಖರೀದಿಯ ಒಪ್ಪಂದದಿಂದ 44 ರಾಜ್ಯಗಳ ಜನರಿಗೆ ಉದ್ಯೋಗ ಸಿಗಲಿದೆ ಈ ಪೈಕಿ ಉದ್ಯೋಗ ಪಡೆ ಯುವ ಹಲವು ಮಂದಿಗೆ ನಾಲ್ಕು ವರ್ಷಗಳ ಡಿಗ್ರಿ ಅಗತ್ಯವಿರುವಿರುವುದಿಲ್ಲ ಎಂದು ಬೈಡನ್ ಹೇಳಿದ್ದಾರೆ.
ಏರ್ ಇಂಡಿಯಾದ ಆರ್ಡರ್ ಡಾಲರ್ ಮೌಲ್ಯದಲ್ಲಿ ಬೋಯಿಂಗ್ ನ ಮೂರನೇ ಅತಿ ದೊಡ್ಡ ಮಾರಾಟವಾಗಿರ ಲಿದ್ದು, ವಿಮಾನ ಮಾರಾಟದ ಸಂಖ್ಯೆಯಲ್ಲಿ 2 ನೇ ಅತಿ ದೊಡ್ದದಾಗಿದೆ.