Saturday, 14th December 2024

ಸಾಮೂಹಿಕ ರಜೆ: ಏರ್ ಇಂಡಿಯಾದ 200 ಸಿಬ್ಬಂದಿ ವಜಾ

ವದೆಹಲಿ: ಏರ್ ಇಂಡಿಯಾದ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಸಾಮೂಹಿಕ ರಜೆ ಹಾಕಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡ ಸಂಸ್ಥೆ 200 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾ ಮಾಡಿದೆ..

200ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಅನಾರೋಗ್ಯದ ನೆಪ ಹೇಳಿ ರಜೆ ಹಾಕಿದ್ದರು. ಇದರಿಂದ 70ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿತ್ತು. ಹೀಗಾಗಿ ಸಂಸ್ಥೆ ಇದನ್ನು‌‌ ಗಂಭಿರವಾಗಿ ತೆಗೆದುಕೊಂದು ಸಿಬ್ಬಂದಿಯನ್ನು ಕೆಲಸದಿಂದ‌ ವಜಾ ಮಾಡಿದೆ. 35 ನೌಕರರಿಗೆ ವಜಾ ಪತ್ರ ಕಳುಹಿಸಲಾಗಿದೆ.

ಸಿಬ್ಬಂದಿಗಳಿಗೆ ಕಳುಹಿಸಿದ ವಜಾ ಪತ್ರದಲ್ಲಿ, ಯಾವುದೇ ಸಮರ್ಥನೀಯ ಕಾರಣವಿಲ್ಲದೆ ಕೆಲಸ ಮಾಡುವ ಮೊದಲು ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿರುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಉಲ್ಲೇಖಿಸಿದೆ.

‘ನಿಮ್ಮ ಕಾರ್ಯವು ಸಾರ್ವಜನಿಕ ಹಿತಾಸಕ್ತಿಗಳಿಗೆ ಹಾನಿಯುಂಟು ಮಾಡುವುದು ಮಾತ್ರವಲ್ಲದೆ, ಕಂಪನಿಗೆ ಮುಜುಗರ, ಗಂಭೀರ ಅಪಖ್ಯಾತಿ ಮತ್ತು ಗಂಭೀರ ವಿತ್ತೀಯ ನಷ್ಟವನ್ನು ಉಂಟು ಮಾಡಿದೆ’ ಎಂದು ಹೇಳಿದೆ.