Wednesday, 11th December 2024

ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅಜಯ್ ಕುಮಾರ್ ನೇಮಕ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಆ.20ರಿಂದ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಅಜಯ್ ಕುಮಾರ್ ಅವರನ್ನ ನೇಮಿಸಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬಡ್ತಿ ನೀಡುವ ಮೊದಲು, ಅಜಯ್‌ ಕುಮಾರ್ ಅವರು ಪ್ರಾದೇಶಿಕ ನಿರ್ದೇಶಕರಾಗಿ ಬ್ಯಾಂಕಿನ ನವದೆಹಲಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿದ್ದರು. ಮೂರು ದಶಕಗಳ ಅವಧಿಯಲ್ಲಿ ವಿದೇಶಿ ವಿನಿಮಯ, ಬ್ಯಾಂಕಿಂಗ್ ಮೇಲ್ವಿಚಾರಣೆ, ಹಣಕಾಸು ಸೇರ್ಪಡೆ, ಕರೆನ್ಸಿ ನಿರ್ವಹಣೆ ಮತ್ತು ಆರ್ ಬಿಐನಲ್ಲಿ ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.